ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ವಿರುದ್ಧ ಬಿಜೆಪಿ ಸಮರ ಸಾರಿದೆ: ಜಹಾಂಗಿರ್‌ಪುರಿ ಕಾರ್ಯಾಚರಣೆಗೆ ಓವೈಸಿ ಕಿಡಿ

Last Updated 20 ಏಪ್ರಿಲ್ 2022, 6:38 IST
ಅಕ್ಷರ ಗಾತ್ರ

ಹೈದರಾಬಾದ್: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತೆ ದೆಹಲಿಯಲ್ಲೂ ಮನೆಗಳನ್ನು ಧ್ವಂಸ ಮಾಡುವ ಮೂಲಕ ಬಿಜೆಪಿ ಬಡವರ ವಿರುದ್ಧ ಸಮರ ಸಾರಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ ಆರೋಪಿಸಿದ್ದಾರೆ.

ನವದೆಹಲಿಯ ಗಲಭೆ ಪೀಡಿತ ಜಹಾಂಗಿರ್‌ಪುರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆದೇಶದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಬಡವರ ವಿರುದ್ಧ ಸಮರ ಸಾರಿದೆ. ಅತಿಕ್ರಮಣದ ಹೆಸರಿನಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ರೀತಿ ದೆಹಲಿಯಲ್ಲೂ ಮನೆಗಳನ್ನು ಕೆಡವಲು ಹೊರಟಿದೆ. ನೋಟಿಸ್ ಇಲ್ಲ, ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ, ಬದುಕಿಗಾಗಿ ಹೋರಾಡುತ್ತಿರುವ ಬಡ ಮುಸ್ಲಿಮರನ್ನು ಶಿಕ್ಷಿಸಲಾಗುತ್ತಿದೆ’ ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ದೆಹಲಿ ಲೋಕೋಪಯೋಗಿ ಇಲಾಖೆಯ ಪಾತ್ರದ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

‘ಇಂತಹ ದ್ರೋಹ ಮತ್ತು ಹೇಡಿತನಕ್ಕಾಗಿ ಜಹಾಂಗೀರ್‌ಪುರಿಯ ಜನರು ಅವರಿಗೆ ಮತ ಹಾಕಿದ್ದಾರೆಯೇ?! ‘ಪೊಲೀಸರು ನಮ್ಮ ನಿಯಂತ್ರಣದಲ್ಲಿಲ್ಲ’ಎಂಬ ಅವರು ಆಗಾಗ್ಗೆ ಹೇಳುವ ಮಾತುಗಳು ಇಲ್ಲಿ ಕೆಲಸಕ್ಕೆ ಬರುವುದಿಲ್ಲ, ಸಂಪೂರ್ಣ ಹತಾಶ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ದೆಹಲಿ ಪಾಲಿಕೆಯು ತೆರವು ಕಾರ್ಯಾಚರಣೆಗೆ ಪೊಲೀಸ್ ಭದ್ರತೆ ಮತ್ತು ವಿವಿಧ ಇಲಾಖೆಗಳ ಸಹಕಾರ ಕೋರಿ ಬರೆದಿರುವ ಪತ್ರವನ್ನು ಓವೈಸಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT