ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಬಿಜೆಪಿ ಸೋಲುತ್ತಿದೆ, ಕಾಂಗ್ರೆಸ್‌ ಅಂತ್ಯಗೊಂಡಿದೆ: ಕೇಜ್ರಿವಾಲ್‌

Last Updated 13 ಸೆಪ್ಟೆಂಬರ್ 2022, 13:29 IST
ಅಕ್ಷರ ಗಾತ್ರ

ಅಹಮದಾಬಾದ್‌: ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸೋಲಲಿದೆ ಎಂದು ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಅಂತ್ಯವಾಗಿದ್ದು, ಈ ಚುನಾವಣೆಯಲ್ಲಿ ಎಎಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರಿಗೆ ಗುಜರಾತ್‌ ರಾಜಕೀಯದಲ್ಲಿ ಹಿಂಬಾಗಿಲಿನ ಮೂಲಕ ಪ್ರವೇಶಿಸಲು ಆಮ್‌ ಆದ್ಮಿ ಪಾರ್ಟಿ ಸಹಕರಿಸುತ್ತಿದೆ ಎಂಬ ಬಿಜೆಪಿ ಆರೋಪದ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಪ್ರತಿಕ್ರಿಯಿಸಿದರು.

ಬಿಜೆಪಿ ಸೋಲುತ್ತಿದೆ. ಅವರು (ಬಿಜೆಪಿ ಮುಖಂಡರು) ಮೇಧಾ ಪಾಟ್ಕರ್‌ ಅಥವಾ ಬೇರೊಬ್ಬರ ಹೆಸರನ್ನು ಎತ್ತಬಹುದು. ಕಳೆದ 27 ವರ್ಷಗಳಲ್ಲಿ ರಾಜ್ಯದ ಜನತೆಗೆ ಏನು ಮಾಡಿದೆ ಮತ್ತು ಮುಂದಿನ ಐದು ವರ್ಷಗಳ ಯೋಜನೆ ಏನು ಎಂಬುದನ್ನು ಜನರ ಮುಂದಿಡಲಿ ಎಂದು ಕೇಜ್ರಿವಾಲ್‌ ಆಗ್ರಹಿಸಿದರು.

ಮೇಧಾ ಪಾಟ್ಕರ್‌ ಅವರಿಗೆ 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಎಎಪಿ ಟಿಕೆಟ್‌ ನೀಡಿತ್ತು. ನರ್ಮದಾ ಡ್ಯಾಂ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಪಾಟ್ಕರ್‌ ಅವರು ಗುಜರಾತ್‌ ಜನರ ಹಿತಕ್ಕೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೋದಿಯ ನಂತರ ಸೋನಿಯಾ ಗಾಂಧಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿಸಲಿದೆ ಎಂಬುದನ್ನು ಕೇಳಲ್ಪಟ್ಟೆ. ಅವರ ಬಳಿ ನನ್ನ ಪ್ರಶ್ನೆಯ ಬಗ್ಗೆ ಕೇಳುವ ಧೈರ್ಯ ಮಾಡುತ್ತೀರಾ? ನಿಮಗೆ ಅವರ ಬಗ್ಗೆ ಭಯವಿದೆ ಎಂಬುದು ನನಗೆ ಅರ್ಥವಾಗುತ್ತದೆ. ಮುಂದಿನ ಸುದ್ದಿಗೋಷ್ಠಿಯಲ್ಲಿ ಅವರ ಬಳಿ, ನೀವು ಮೋದಿ ಅವರ ನಂತರ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುತ್ತಿದ್ದೀರಂತೆ. ಹಾಗೆಂದು ಕೇಜ್ರಿವಾಲ್‌ ಹೇಳಿದರು. ನೀವೇನು ಹೇಳುತ್ತೀರಿ ಎಂದು ಅವರ ಬಳಿ ಕೇಳಿ ಎಂದು ಕೇಜ್ರಿವಾಲ್‌ ಪ್ರತಿಕ್ರಿಯಿಸಿದರು.

ಗುಜರಾತ್‌ನ ಎಲ್ಲ 182 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದೆ. ಪ್ರಸ್ತುತ ರಾಜ್ಯಕ್ಕೆ ಸರಿಯಾದ ಮುಖ್ಯಮಂತ್ರಿಯೇ ಇಲ್ಲ. ದೆಹಲಿಯಿಂದ ಆಡಳಿತ ನಡೆಸಲಾಗುತ್ತಿದೆ ವಿಜಯ್‌ ರೂಪಾನಿ ಅವರನ್ನು ಸಿಎಂ ಮಾಡಿದ್ದು ಯಾರು? ಭೂಪೇಂದ್ರ ಪಟೇಲ್‌ ಅವರನ್ನು ಸಿಎಂ ಮಾಡಿದ್ದು ಯಾರು? ಜನರು ಇವರನ್ನು ಮುಖ್ಯಮಂತ್ರಿ ಮಾಡಲಿಲ್ಲ. ದೆಹಲಿಯಲ್ಲಿರುವವರು ಇಬ್ಬರನ್ನು ಮುಖ್ಯಮಂತ್ರಿಗಳನ್ನಾಗಿಸಿದರು. ಸರ್ಕಾರ ನಡೆಯಬೇಕಿರುವುದು ಈ ರೀತಿ ಅಲ್ಲ ಎಂದರು.

ಗುಜರಾತ್‌ ಜನರಿಗೆ ಉಚಿತವಾಗಿ ವಿದ್ಯುತ್‌ ನೀಡುವ ಬಗ್ಗೆ ನಾನು ಪ್ರಸ್ತಾಪಿಸಿದಾಗ ಬಿಜೆಪಿ ಏಕೆ ವಿರೋಧಿಸಿತು? ಎಂದು ಪ್ರಶ್ನಿಸಿದರು.

ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಎಎಪಿ ಅಲ್ಲಿನ ನೌಕರರಿಗೆ ಸಂಬಳ ನೀಡಿಲ್ಲವೆಂದು ಕಾಂಗ್ರೆಸ್‌ ಆಪಾದಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌, ಕಾಂಗ್ರೆಸ್‌ನ ಅಂತ್ಯವಾಗಿದೆ. ಅದರ ಪ್ರಶ್ನೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT