ಬುಧವಾರ, ಜೂನ್ 29, 2022
24 °C

ಲಸಿಕೆ ಕೇಂದ್ರದಲ್ಲೇ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ಬಿಜೆಪಿ ನಾಯಕಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಂದೋರ್: ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್‌ನ ಲಸಿಕೆ ಕೇಂದ್ರವೊಂದರಲ್ಲಿ ಕೇಕ್ ಕತ್ತರಿಸಿ ಬಿಜೆಪಿ ನಾಯಕಿಯೊಬ್ಬರು ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ವಿಡಿಯೊ ಎಲ್ಲೆಡೆ ಹರದಾಡಿದ್ದು, ಈ ಬಗ್ಗೆ ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿದೆ.

ಇಂದೋರ್‌ನ ವಾರ್ಡ್ ಸಂಖ್ಯೆ 58 ರ ಲಸಿಕೆ ಕೇಂದ್ರದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ವಾರ್ಡ್‌ನ ಬಿಜೆಪಿ ಘಟಕದ ಮುಖ್ಯಸ್ಥೆ ಮಾಧುರಿ ಜೈಸ್ವಾಲ್ ಅವರು ಲಸಿಕಾ ಕೇಂದ್ರದ ಕಾರ್ಯವೈಖರಿ ಪರಿಶೀಲನೆಗೆ ಮಾತ್ರ ತೆರಳಿದ್ದೆ. ಆದರೆ, ಈ ಸಂದರ್ಭ ಬೆಂಬಲಿಗರೊಬ್ಬರು ಕೇಕ್ ತಂದು ಜನ್ಮದಿನವನ್ನು ಆಚರಿಸಲು ಮುಂದಾದಾಗ ನಿರಾಕರಿಸಲು ಆಗಲಿಲ್ಲ ಎಂದಿದ್ದಾರೆ.

‘ಎಂಪಿಎಚ್ಆರ್‌ಸಿ(ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗ)ವು ಈ ಘಟನೆ ಕುರಿತಂತೆ ಸುಮೊಟೊ ಪ್ರಕರಣ ದಾಖಲಿಸಿದೆ.

ಇಂದೋರ್ ವಿಭಾಗದ ಆಯುಕ್ತರು ಮತ್ತು ಪೊಲೀಸ್ ಇನ್ಸ್‌ಸ್ಪೆಕ್ಟರ್ ಜನರಲ್ ಅವರಿಗೆ ಎರಡು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು