ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಬಿಜೆಪಿ ಶಾಸಕ ಸದನದಿಂದ ಅಮಾನತು: ಅಧಿವೇಶನದಲ್ಲಿ ಬಿಜೆಪಿ ಸಂಖ್ಯೆ ಶೂನ್ಯ

Last Updated 13 ಸೆಪ್ಟೆಂಬರ್ 2022, 10:09 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ಸ್ಪೀಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಅಲ್ಲಿನ ಬಿಜೆಪಿ ಶಾಸಕ ಏತಾಳಾ ರಾಜೇಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.

ಅಧಿವೇಶನದ ವೇಳೆ ಸ್ಪೀಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಾನೂನು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ಅವರ ನಿಲುವಳಿ ಸೂಚನೆ ಮೇರೆಗೆ ಸ್ಪೀಕರ್ ಪಿ. ಶ್ರೀನಿವಾಸ್ ರೆಡ್ಡಿ ಹುಜುರಾಬಾದ್ ಬಿಜೆಪಿ ಶಾಸಕ ಏತಾಳಾ ರಾಜೇಂದ್ರ ಅವರನ್ನು ಅಮಾನತು ಮಾಡಿದ್ದಾರೆ. ಪ್ರಸ್ತುತ ಅಧಿವೇಶನ ಮುಗಿಯುವವರೆಗೆ ಅವರು ಸದನವನ್ನು ಪ್ರವೇಶಿಸುವಂತಿಲ್ಲ.

ಇದಕ್ಕೂ ಮುನ್ನ ರಾಜೇಂದ್ರ ಅವರಿಗೆ ಕ್ಷಮೆ ಕೇಳುವಂತೆಸಚಿವ ವೇಮುಲ ಪ್ರಶಾಂತ್ ರೆಡ್ಡಿ ಸೂಚನೆ ನೀಡಿದ್ದರು. ಆದರೆ, ರಾಜೇಂದ್ರ ಕ್ಷಮೆ ಕೇಳಿರಲಿಲ್ಲ. ಇದರಿಂದ ಅಮಾನತು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ‍್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಕಳೆದ ತಿಂಗಳು ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು. ಸದ್ಯ ರಾಜಾ ಸಿಂಗ್ ಜೈಲಿನಲ್ಲಿದ್ದಾರೆ.

ಈ ಮೂಲಕ ಇದ್ದ ಇಬ್ಬರು ಬಿಜೆಪಿ ಶಾಸಕರಲ್ಲಿ ಅಧಿವೇಶನದಲ್ಲಿ ಭಾಗವಹಿಸಲು ಯಾರೂ ಇಲ್ಲದಂತಾಗಿದೆ.

ಇನ್ನುಏತಾಳಾ ರಾಜೇಂದ್ರ ಅವರು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಟಿಆರ್‌ಎಸ್‌ನಲ್ಲಿ ಇದ್ದರು. ಆ ನಂತರ ಟಿಆರ್‌ಎಸ್ ತೊರೆದು ಬಿಜೆಪಿ ಸೇರಿ ಶಾಸಕರಾಗಿದ್ದರು. ಸದನದಲ್ಲಿ ಏತಾಳಾ ರಾಜೇಂದ್ರ ನಡವಳಿಕೆ ಸರಿ ಇರುತ್ತಿರಲಿಲ್ಲ ಎಂದು ಟಿಆರ್‌ಎಸ್ ಶಾಸಕರು ದೂರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 119 ಸ್ಥಾನಗಳಲ್ಲಿ ಟಿಆರ್‌ಎಸ್ 103, ಎಐಎಐಎಂ 7, ಕಾಂಗ್ರೆಸ್ 5, ಬಿಜೆಪಿ 2 ಹಾಗೂ ಪಕ್ಷೇತರ 1 ಗೆದ್ದಿತ್ತು. 2023 ಡಿಸೆಂಬರ್ ವೇಳೆಗೆ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT