ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಮತ್ತು ಜಮೀನು ಜಿಹಾದ್ ಪಿಡುಗನ್ನು ತಡೆಯಲು ಕಾನೂನು ಜಾರಿ: ಅಮಿತ್ ಶಾ

Last Updated 26 ಮಾರ್ಚ್ 2021, 15:18 IST
ಅಕ್ಷರ ಗಾತ್ರ

ಕಮಲಾಪುರ (ಅಸ್ಸಾಂ): ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ 'ಲವ್ ಮತ್ತು ಜಮೀನು ಜಿಹಾದ್' ಪಿಡುಗಿನ ವಿರುದ್ಧ ಬಿಜೆಪಿ ಕಾನೂನು ಜಾರಿ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಅಸ್ಸಾಮಿಗಳ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಬಲಪಡಿಸಲು ಸೂಕ್ತ ಕಾನೂನುಗಳು ಮತ್ತು ನೀತಿಗಳನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ.

ಕೋಮು ಹೆಸರಿನಲ್ಲಿ ಹೊರಗಿಡುವಿಕೆ ಮತ್ತು ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಗುರುತಿಸಿ ಅವರಲ್ಲಿನ ತೀವ್ರವಾದವನ್ನು ಸರಿಪಡಿಸಲು ನೀತಿ ರೂಪಿಸಲಾಗುವುದು ಎಂದು ಬಿಜೆಪಿಯ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

'ಕಾಂಗ್ರೆಸ್ ಪ್ರಣಾಳಿಕೆ ಕೇವಲ ಚುನಾವಣಾ ಪ್ರಚಾರದ ಸಾಧನವಾಗಿದೆ ಆದರೆ ಬಿಜೆಪಿ ಪ್ರಣಾಳಿಕೆ ಅನುಷ್ಠಾನಕ್ಕೆ ಮೀಸಲಾಗಿದೆ' ಎಂದು ಪ್ರತಿಪಾದಿಸಿದ ಅವರು, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನು ಅಸ್ಸಾಂನ ಗುರುತಿನ ಪ್ರತೀಕ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ ಎಂದು ಆರೋಪಿಸಿದರು.

'ಅವರು (ರಾಹುಲ್) ಅಸ್ಸಾಂ ಮತ್ತು ಅದರ ಗುರುತನ್ನು ಅರ್ಥಮಾಡಿಕೊಳ್ಳುವುದಿಲ್ಲ' ಎಂದು ಅವರು ಹೇಳಿದರು.

ಅಸ್ಸಾಂನ ಅಸ್ಮಿತೆಯು ವೈಷ್ಣವ್ ಸಂತರಾದ ಶ್ರೀಮಂತ ಶಂಕರ್‌ದೇವ ಮತ್ತು ಮಾಧವದೇವ, ಮೊಘಲ್ ಆಕ್ರಮಣದಿಂದ ರಾಜ್ಯವನ್ನು ರಕ್ಷಿಸಿದ ಧೈರ್ಯಶಾಲಿ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಮತ್ತು ಭಾರತ ರತ್ನ ಭೂಪೆನ್ ಹಜಾರಿಕಾ ಮತ್ತು ಗೋಪಿನಾಥ್ ಬೋರ್ಡೊಲಾಯ್ ಅವರೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

'ಕಾಂಗ್ರೆಸ್ ಪ್ರಯತ್ನಗಳ ಹೊರತಾಗಿಯೂ ಅಜ್ಮಲ್ ಅಸ್ಸಾಂನ ಗುರುತಿನ ಸಂಕೇತವಾಗಲು ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಮತ್ತು ಎಐಯುಡಿಎಫ್ ರಾಜ್ಯವನ್ನು ಅಕ್ರಮ ಒಳನುಸುಳುವಿಕೆಯಿಂದ ರಕ್ಷಿಸಬಹುದೇ?' ರಾಹುಲ್ ಬಾಬಾ ಅವರ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು ಒಮ್ಮೆ ಎಐಯುಡಿಎಫ್ ಮುಖ್ಯಸ್ಥರನ್ನು ಹೊರಗಿಟ್ಟಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. 'ಅಜ್ಮಲ್ ಯಾರು?' ಮತ್ತು ಕಾಂಗ್ರೆಸ್ ಈಗ ಮತಗಳನ್ನು ಸಂಗ್ರಹಿಸಲು ಅಜ್ಮಲ್ ಅವರೊಂದಿಗೆ ಕೈಜೋಡಿಸಿದೆ. ರಾಹುಲ್ ಅವರನ್ನು 'ಪ್ರವಾಸಿ' ಎಂದು ಕರೆದ ಶಾ ಅವರು, ಕಾಂಗ್ರೆಸ್ ನಾಯಕ ಚುನಾವಣೆ ಸಮಯದಲ್ಲಿ ಕೇವಲ 2-3 ದಿನಗಳವರೆಗೆ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಮತ್ತು ನಂತರ ಮುಂದಿನ ಐದು ವರ್ಷಗಳವರೆಗೆ ಕಣ್ಮರೆಯಾಗುತ್ತಾರೆ ಎಂದು ಹೇಳಿದರು.

ಅಸ್ಸಾಂನ ಜನರ ಮುಂದೆ ಕೇವಲ ಮೂರು ಚಿತ್ರಣಗಳಿವೆ. ಅವೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮತ್ತು ಜನರಿಗೆ ಸೇವೆ, ರಾಹುಲ್ ಗಾಂಧಿಯವರ ಪ್ರವಾಸೋದ್ಯಮ ಮತ್ತು ಅಜ್ಮಲ್ ಅವರ ಒಳನುಸುಳುವಿಕೆಯ ಅಜೆಂಡಾ. ಇವುಗಳಲ್ಲಿ ಅಸ್ಸಾಂನ ಜನರು ತಮಗೆ ಬೇಕಾದುದನ್ನು ನಿರ್ಧರಿಸಬೇಕು, ಅಭಿವೃದ್ಧಿಗಾಗಿ ಮೋದಿಜಿಯ ಡಬಲ್ ಎಂಜಿನ್ ಸರ್ಕಾರ ಅಥವಾ ಒಳನುಸುಳುವಿಕೆಗಾಗಿ ಕಾಂಗ್ರೆಸ್-ಎಐಯುಡಿಎಫ್‌ನ ಡಬಲ್ ಎಂಜಿನ್ ಬೇಕಾ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT