ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಡಿಯಲ್ಲಿ ಬಿಜೆಪಿ-ರೈತ ಪ್ರತಿಭಟನಾಕಾರರ ನಡುವೆ ಘರ್ಷಣೆ

Last Updated 30 ಜೂನ್ 2021, 12:56 IST
ಅಕ್ಷರ ಗಾತ್ರ

ಗಾಜಿಯಾಬಾದ್ (ಉ.ಪ್ರದೇಶ): ದೆಹಲಿ ಹಾಗೂ ಉತ್ತರ ಪ್ರದೇಶ ಗಡಿ ಪ್ರದೇಶವಾಗಿರುವ ಗಾಜಿಪುರದಲ್ಲಿ ಬುಧವಾರ ಬಿಜೆಪಿ ಬೆಂಬಲಿಗರು ಮತ್ತು ರೈತ ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿದೆ.

ಕೇಂದ್ರ ಕೃಷಿ ಕಾಯ್ದೆಗಳನ್ನುವಿರೋಧಿಸಿ ರೈತರು ಪ್ರಮುಖವಾಗಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಬೆಂಬಲಿಗರು ಕಳೆದ ವರ್ಷ ನವೆಂಬರ್ ತಿಂಗಳಿಂದ ಈ ಪ್ರದೇಶದಲ್ಲಿ ಧರಣಿ ನಿರತರಾಗಿದ್ದಾರೆ. ಇದೇ ಪ್ರದೇಶದ ಫ್ಲೈಓವರ್‌ನಲ್ಲಿಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದಾಗ ಈ ಘರ್ಷಣೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ 12ರ ಹೊತ್ತಿಗೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಮೆರವಣಿಗೆ ತಲುಪುತ್ತಿದ್ದಂತೆಯೇ ಘರ್ಷಣೆ ಉಂಟಾಗಿದೆ. ಎರಡು ಕಡೆಯವರು ಕೋಲುಗಳ ಸಹಾಯದಿಂದ ಜಗಳವಾಡಿದರು ಎಂದು ವರದಿಯಾಗಿದೆ.

ಬಿಜೆಪಿ ನಾಯಕ ಅಮಿತ್ ವಾಲ್ಮೀಕಿ ಅವರನ್ನು ಸ್ವಾಗತ ಕೋರುವ ಮೆರವಣಿಗೆಯ ವೇಳೆ ಘರ್ಷಣೆ ಉಂಟಾಗಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಾಗೂ ಚಿತ್ರಗಳು ಹರಿದಾಡಿದ್ದವು.

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಮತ್ತು ಮಸಿ ಬಳಿಯಲು ಸರ್ಕಾರ ನಡೆಸಿದ ವ್ಯವಸ್ಥಿತ ಪಿತೂರಿ ಇದಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಸ್ವಾಗತ ಮೆರವಣಿಗೆಯ ಹೆಸರಲ್ಲಿ ಘರ್ಷಣೆ ಮಾಡುತ್ತಿರುವ ಬಿಜೆಪಿ ಬೆಂಬಲಿಗರಿಗೆ ಅವಕಾಶ ನೀಡದಂತೆ ಜಿಲ್ಲಾಡಳಿತ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ರೈತರೊಂದಿಗೆ ಕೆಟ್ಟದಾಗಿ ವರ್ತಿಸಿದರು. ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ವಾಹನಗಳನ್ನು ಅವರೇ ಧ್ವಂಸಗೊಳಿಸಿದರು. ಇದರ ವಿರುದ್ಧ ದೂರು ದಾಖಲಿಸಲಾಗುವುದು. ಸರ್ಕಾರದ ಈ ಪಿತೂರಿ ಯಶಸ್ವಿಯಾಗುವುದಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕುವ ಇಂತಹ ಪ್ರಯತ್ನಗಳನ್ನು ಹಿಂದೆಯೂ ನಡೆಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಕ್ತಾರ ಜಗ್ತಾರ್ ಸಿಂಗ್ ಬಾಜ್ವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT