ಪಾಟ್ನಾ: ಬಿಹಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ಅವರು ಬುಧವಾರ ಆಯ್ಕೆಯಾದರು.

ಮಹಾ ಮೈತ್ರಿ ಕೂಟದಿಂದ ಆರ್ಜೆಡಿಯ ಅವಧ್ ಬಿಹಾರಿ ಚೌಧರಿ ಅವರನ್ನು ಕಣಕ್ಕಿಳಿಸಿತ್ತು. ಆಡಳಿತರೂಢ ಎನ್ಡಿಎ ಅಭ್ಯರ್ಥಿ ವಿಜಯ್ ಕುಮಾರ್ 126 ಮತಗಳನ್ನು ಪಡೆದು ವಿಜೇತರಾದರು. ಅವಧ್ ಅವರಿಗೆ 114 ಮತಗಳು ದೊರೆತವು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರು. ಹಾಗಾಗಿ ಅವರು ಮತದಾನದ ವೇಳೆ ಇಲ್ಲಿ ಹಾಜರಿರುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.

ಮುಖ್ಯಮಂತ್ರಿಗಳು ಸಭಾ ನಾಯಕರಾಗಿರುವುದರಿಂದ ಅವರ ಉಪಸ್ಥಿತಿ ನ್ಯಾಯ ಸಮ್ಮತವಾಗಿದೆ ಎಂದು ಪ್ರತಿಪಾದಿಸುವ ಮೂಲಕ ವಿರೋಧ ಪಕ್ಷದ ಆಕ್ಷೇಪವನ್ನು ನಿರಾಕರಿಸಿ, ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.