ಮಂಗಳವಾರ, ಆಗಸ್ಟ್ 9, 2022
23 °C

ತೀಸ್ತಾ ಹಿಂದೆ ಸೋನಿಯಾ ಇದ್ದರು ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2002ರಲ್ಲಿ ನಡೆದ ಗುಜರಾತ್ ನರಮೇಧದ ಕುರಿತಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ಆಂದೋಲನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದ್ದರು ಎಂಬ ಬಿಜೆಪಿ ಆರೋಪ ಆಧಾರರಹಿತ ಎಂದು ಕಾಂಗ್ರೆಸ್ ಹೇಳಿದೆ.

‘ಬಿಜೆಪಿಯ ಈ ಆರೋಪವು ಆಧಾರರಹಿತ ಮತ್ತು ಸುಪ್ರೀಂ ಕೋರ್ಟ್ ಆದೇಶದ ನೇರ ನ್ಯಾಯಾಂಗ ನಿಂದನೆಯಾಗಿದೆ’ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ಸೆಟಲ್‌ವಾಡ್ ಅವರು ನಡೆಸುತ್ತಿದ್ದ ಎನ್‌ಜಿಒಗೆ ಯುಪಿಎ ಸರ್ಕಾರ ಅದರಲ್ಲೂ ಮುಖ್ಯವಾಗಿ ಆಗಿನ ಶಿಕ್ಷಣ ಸಚಿವಾಲಯ ₹1.4 ಕೋಟಿ ನೀಡಿತ್ತು. ಈ ಹಣವನ್ನು ಮೋದಿ ಹಾಗೂ ಭಾರತಕ್ಕೆ ಅಪಮಾನವಾಗಿಸುವ ಆಂದೋಲನಕ್ಕೆ ಬಳಸಲಾಗಿತ್ತು. ಇದರಲ್ಲಿ ಸೆಟಲ್‌ವಾಡ್ ಅವರು ಒಬ್ಬರೇ ಇಲ್ಲ. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವೂ ಇದೆ’ ಎಂದು ಆರೋಪಿಸಿದ್ದರು.

2002ರ ಗೋಧ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರಗಳ ಕುರಿತು ಮೋದಿ ಹಾಗೂ ಇತರರನ್ನು ಎಸ್ಐಟಿ ದೋಷಾರೋಪ ಮುಕ್ತವಾಗಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿ ಹಾಕಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು