ಬುಧವಾರ, ಮಾರ್ಚ್ 3, 2021
18 °C

ಜಮ್ಮು ಕಾಶ್ಮೀರದಲ್ಲಿ 10 ದಿನಗಳಲ್ಲಿ ಎರಡನೇ ಸುರಂಗ ಪತ್ತೆ ಮಾಡಿದ ಬಿಎಸ್‌ಎಫ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆಯು ಮತ್ತೊಂದು ಸುರಂಗ ‍ಪತ್ತೆ ಮಾಡಿದೆ. ಉಗ್ರರಿಗೆ ಭಾರತದ ಗಡಿಯೊಳಗೆ ಪ್ರವೇಶಿಸಲು ಅನುಕೂಲವಾಗುವಂತೆ ಪಾಕಿಸ್ತಾನವು ಈ ಸುರಂಗವನ್ನು ನಿರ್ಮಿಸಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.

‘ಕಳೆದ 10 ದಿನಗಳಲ್ಲಿ ಪತ್ತೆಯಾದ ಎರಡನೇ ಸುರಂಗ ಇದಾಗಿದೆ. ಹಿರಾನಗರ ಸೆಕ್ಟರ್‌ನ ಪನ್ಸಾರ್ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಈ ರಹಸ್ಯ ಸುರಂಗ ಪತ್ತೆಯಾಗಿದೆ. ಇದು ಆರು ತಿಂಗಳಲ್ಲಿ ಪತ್ತೆಯಾದ ನಾಲ್ಕನೇ ಸುರಂಗವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಜನವರಿ 13 ರಂದು ಬೊಬಿಯಾನ ಗ್ರಾಮದಲ್ಲಿ 150 ಮೀಟರ್‌ ಉದ್ದದ ಸುರಂಗ ಪತ್ತೆ ಮಾಡಲಾಗಿತ್ತು. ಈಗ ಪತ್ತೆ ಮಾಡಿರುವ ಸುರಂಗವು 150 ಮೀಟರ್‌ ಉದ್ದ ಮತ್ತು 30 ಅಡಿ ಆಳ ಹೊಂದಿದೆ. ಸದ್ಯ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ’ ಎಂದು ಬಿಎಸ್‌ಎಫ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು