ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಐದು ಅಂತಸ್ತಿನ ಕಟ್ಟಡ ಕುಸಿತ; 60 ರಿಂದ 70 ಜನರು ಸಿಲುಕಿರುವ ಶಂಕೆ

Last Updated 24 ಆಗಸ್ಟ್ 2020, 15:33 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾದ್ ನಗರದಲ್ಲಿ ಸೋಮವಾರ ಐದು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ 60 ರಿಂದ 70 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಸಾವುನೋವು ಸಂಭವಿಸಿರುವ ವರದಿಯಾಗಿಲ್ಲ.

ಸ್ಥಳೀಯ ನಿವಾಸಿಗಳ ಪ್ರಕಾರ, ಸಂಜೆ 6 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಪುಣೆಯ ಮೂರು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ) ತಂಡವನ್ನು ಮಹಾದ್‌ಗೆ ಕಳುಹಿಸಲಾಗಿದೆ. ಸ್ಥಳೀಯ ಆಡಳಿತವು ಈಗಾಗಲೇ ಜನರನ್ನು ಸ್ಥಳಾಂತರಿಸುವ ಕೆಲಸವನ್ನು ಪ್ರಾರಂಭಿಸಿದೆ. ಈವರೆಗೆ 15 ಜನರನ್ನು ಅವಶೇಷಗಳಅಡಿಯಿಂದ ರಕ್ಷಿಸಲಾಗಿದೆ.

10 ವರ್ಷಗಳಷ್ಟು ಹಳೆಯದಾದ ಬಹುಮಹಡಿ ಕಟ್ಟಡದಲ್ಲಿ 40 ಮನೆಗಳಿವೆ. ಮೊದಲ ಮೂರು ಮಹಡಿಗಳು ಕುಸಿದ ಬಳಿಕ ಕೆಲವು ಜನರು ಕಟ್ಟಡದಿಂದ ಹೊರಗೆ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ನಾವು 15 ಜನರನ್ನು ಹೊರಗೆ ಕರೆತರಲು ಸಾಧ್ಯವಾಯಿತು. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯಗಢದ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಹಲವಾರು ಭಾಗಗಳು ಪ್ರವಾಹದಿಂದಾಗಿ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯದ ಅನೇಕ ಪ್ರದೇಶಗಳಲ್ಲಿ ಮನೆ ಕುಸಿದ ಘಟನೆಗಳು ವರದಿಯಾಗಿವೆ.

ಇಂದು ನಾಗಪುರದಲ್ಲಿ 50 ವರ್ಷಗಳ ಹಿಂದಿನ ಕಟ್ಟಡವೊಂದು ಕುಸಿದು, ಒರ್ವ ಮೃತಪಟ್ಟರೆ ನಾಲ್ಕು ಜನರು ಗಾಯಗೊಂಡಿದ್ದರು. ಸಾದರ್‌ನ ಆಜಾದ್ ಚೌಕ್‌ನಲ್ಲಿರುವ ಒಂದು ಅಂತಸ್ತಿನ ಮನೆ ಸೋಮವಾರ ಮುಂಜಾನೆ 4.40ರ ಸುಮಾರಿಗೆ ಕುಸಿದಿದೆ. ಐವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಓರ್ವ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT