ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಗಳ ಮೇಲೆ ಜಾನುವಾರು: 10 ತಿಂಗಳಲ್ಲಿ 4 ಸಾವಿರ ರೈಲು ವಿಳಂಬ

ಅಕ್ಟೋಬರ್‌ನ ಮೊದಲ 9 ದಿನಗಳಲ್ಲೇ 200 ರೈಲು ವಿಳಂಬ
Last Updated 30 ಅಕ್ಟೋಬರ್ 2022, 14:37 IST
ಅಕ್ಷರ ಗಾತ್ರ

ನವದೆಹಲಿ: ರೈಲು ಹಳಿಗಳ ಮೇಲೆ ಜಾನುವಾರುಗಳು ಇದ್ದ ಕಾರಣ, ಅಕ್ಟೋಬರ್ ತಿಂಗಳ ಮೊದಲ 9 ದಿನಗಳಲ್ಲಿ 200 ರೈಲುಗಳು ವಿಳಂಬವಾಗಿದ್ದು, ವರ್ಷದ ಹತ್ತು ತಿಂಗಳಲ್ಲಿ ಸುಮಾರು 4 ಸಾವಿರ ರೈಲುಗಳು ವಿಳಂಬವಾಗಿ ಸಂಚರಿಸಿವೆ ಎಂದು ರೈಲ್ವೆ ಇಲಾಖೆಯ ಅಧಿಕೃತ ಅಂಕಿ– ಅಂಶಗಳು ತಿಳಿಸಿವೆ.

ಅಕ್ಟೋಬರ್ 1ರಂದು ಉದ್ಘಾಟನೆಗೊಂಡ ಮುಂಬೈ–ಅಹಮದಾಬಾದ್ ಮಾರ್ಗದ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲು ಈ ತಿಂಗಳೊಂದರಲ್ಲೇ ಮೂರು ಬಾರಿ ಜಾನುವಾರುಗಳು ಅಡ್ಡ ಬಂದ ಕಾರಣ ವಿಳಂಬವಾಗಿ ಚಲಿಸಿವೆ. ಅಷ್ಟೇ ಅಲ್ಲ ರೈಲಿನ ಮುಂಭಾಗಕ್ಕೆ ಹಾನಿಯೂ ಆಗಿದೆ.

ಈ ರೀತಿಯ ಪ್ರಕರಣಗಳು ಹೆಚ್ಚು ದಾಖಲಾಗಿರುವ ಪ್ರದೇಶಗಳನ್ನು ರೈಲ್ವೆ ಇಲಾಖೆಯು ಗುರುತಿಸಿದ್ದು, ಅಲ್ಲಿ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರೈಲು ಹಳಿಗಳ ಮೇಲೆ ಜಾನುವಾರುಗಳು ಅಡ್ಡಬಂದ ಕಾರಣ ಈ ವರ್ಷದ ಜನವರಿಯಲ್ಲಿ 360, ಸೆಪ್ಟೆಂಬರ್‌ನಲ್ಲಿ 635 ರೈಲುಗಳು ವಿಳಂಬವಾಗಿ ಚಲಿಸಿವೆ. ಪ್ರತಿದಿನವೂ 22ಕ್ಕೂ ಹೆಚ್ಚು ರೈಲುಗಳು ವಿಳಂಬವಾಗಿವೆ. ವರ್ಷದ ಹತ್ತು ತಿಂಗಳಲ್ಲಿ ಒಟ್ಟು 4,433 ರೈಲುಗಳು ವಿಳಂಬವಾಗಿವೆ ಎಂದು ಅಂಕಿ– ಅಂಶಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT