ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಕೃಷಿ ಕಾಯ್ದೆಗಳು ಬಿಜೆಪಿಯ ಬಂಡವಾಳಶಾಹಿಗಳಿಗೆ ನೆರವಾಗುತ್ತವೆ: ಮಮತಾ

Last Updated 9 ಫೆಬ್ರುವರಿ 2021, 14:24 IST
ಅಕ್ಷರ ಗಾತ್ರ

ಬರ್ಧಮಾನ್: ಕೇಂದ್ರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳು ಅದರ ಸ್ನೇಹಿತರಾದ ಅದಾನಿಯವರಂತಹ ಕೆಲವು ಉದ್ಯಮಿಗಳಿಗೆ ಸಹಾಯ ಮಾಡಲು ಉದ್ದೇಶಿಸಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಉದ್ಯಮಿಗಳು ಬಿಜೆಪಿಯ ಬಂಡವಾಳಶಾಹಿಗಳು ಮತ್ತು ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದ ನಂತರ ಅವರು ರೈತರಿಂದ ಬಲವಂತವಾಗಿ ಬೆಳೆಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ ಎಂದ ಅವರು, ರೈತರಿಗೆ ಭಯಪಡಬೇಡಿ ಎಂದು ಕೇಳಿಕೊಂಡರು ಮತ್ತು ಅವರನ್ನು ಹಿಂಸಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

'ಬಿಜೆಪಿಗೆ ಅದಾನಿಬಾಬುರಂತಹ ಕೆಲವು ಸ್ನೇಹಿತರನ್ನು ಹೊಂದಿದೆ, ಅವರೆಲ್ಲರು ಕೋಟ್ಯಧಿಪತಿಗಳು, ಜಮೀನುದಾರರು ಹಾಗೂ ಬಂಡವಾಳಶಾಹಿಗಳು. ಅವರು ರೈತರಿಂದ ಬಲವಂತವಾಗಿ ಬೆಳೆಗಳನ್ನು ಖರೀದಿಸುವ ಬಂಡವಾಳಶಾಹಿಗಳಾಗಿದ್ದಾರೆ ಮತ್ತು ಅವುಗಳನ್ನು ಸಂಗ್ರಹಿಸಲು ದೆಹಲಿಯಲ್ಲಿ ಈಗಾಗಲೇ ದೊಡ್ಡ ಉಗ್ರಾಣಗಳನ್ನು ನಿರ್ಮಿಸಿದ್ದಾರೆ. ಮತ್ತು ಯಾವಾಗ ಜನರಿಗೆ ಬೆಳೆಗಳ ಅಗತ್ಯವಿರುತ್ತದೋ ಆಗ ಅವರು ನೀಡುವುದಿಲ್ಲ' ಎಂದು ದೂರಿದರು.

'ಕೃಷಿ ಕಾನೂನುಗಳ ವಿರುದ್ಧ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ನ ರೈತರು ಪ್ರತಿಭಟನೆ ನಡೆಸಲು ಇದು ಕಾರಣವಾಗಿದೆ. ಆಕೆಯನ್ನು ಮತ್ತವರ ಪಕ್ಷವನ್ನು ಬೆಂಬಲಿಸುವ ಕೃಷಿಕರಿಗೆ ಭರವಸೆ ನೀಡಿದ ಅವರು, ನಾನು ಅವರೊಂದಿಗೆ ಈಗಾಗಲೇ ನಾಲ್ಕೈದು ಬಾರಿ ಫೋನ್‌ನಲ್ಲಿ ಮಾತನಾಡಿದ್ದೇನೆ. ಅವರೊಂದಿಗೆ ಮಾತನಾಡಲು ನನ್ನ ಪ್ರತಿನಿಧಿಗಳನ್ನು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಕಳುಹಿಸಿದ್ದೆ. ನಾವು ಬದುಕಿರುವವರೆಗೂ ರೈತರ ಮೇಲೆ ಯಾವುದೇ ರೀತಿಯ ಚಿತ್ರಹಿಂಸೆ ನೀಡಲು ಬಿಡುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ' ಎಂದು ತಿಳಿಸಿದರು.

ನಾನು ರೈತರಿಂದ ನೇರವಾಗಿಯೇ ಬೆಳೆಗಳನ್ನು ಖರೀದಿಸಲು ಬಯಸುತ್ತೇನೆ. ಚಿಂತಿಸಬೇಡಿ, ನೀವು (ರೈತರು) ರಾಷ್ಟ್ರದ ಹೆಮ್ಮೆ. ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಪಂಜಾಬ್‌ಗಳಿಂದ ಖರೀಸಿರುವಂತೆ ಪಶ್ಚಿಮ ಬಂಗಾಳದಲ್ಲಿ ಭತ್ತ ಖರೀದಿಸದೆ ಕೇಂದ್ರವು ಭತ್ತ ಬೆಳೆಗಾರರನ್ನು ಕಳೆದುಕೊಳ್ಳುತ್ತಿದೆ. ಕೇಂದ್ರವು ಪಶ್ಚಿಮ ಬಂಗಾಳದ ರೈತರಿಂದ ಕೇವಲ 76,000 ಟನ್ ಭತ್ತವನ್ನು ಖರೀದಿಸಿದೆ, ಆದರೆ ಅವರು 2.5 ಕೋಟಿ ಟನ್ ಬೆಳೆ ಉತ್ಪಾದಿಸಿದ್ದಾರೆ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳದ ರೈತರ ಮೇಲಿರುವ ಕೇಂದ್ರದ ವಿರೋಧಿ ನೀತಿಯನ್ನು ತೋರಿಸುತ್ತದೆ. ರಾಜ್ಯ ಸರ್ಕಾರವು 49 ಲಕ್ಷ ಟನ್ ಭತ್ತವನ್ನು ರೈತರಿಂದ ಖರೀದಿಸಿದೆ. ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 73 ಲಕ್ಷ ರೈತರನ್ನು ರಾಜ್ಯ ಸರ್ಕಾರದ ಕೃಷಿಕ ಬಂಧು ಯೋಜನೆಯಡಿ ತರಲಾಗುವುದು ಮತ್ತು ಈಗಾಗಲೇ 55 ಲಕ್ಷ ಜನರನ್ನು ಇದರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಈ ಯೋಜನೆಯನ್ನು ಜನವರಿ 2019 ರಲ್ಲಿ ಬ್ಯಾನರ್ಜಿ ಪ್ರಾರಂಭಿಸಿದರು. ಇದು ರೈತರಿಗೆ ಖಚಿತವಾದ ಆದಾಯ ಮತ್ತು ಮೃತ ರೈತರಿಗೆ ನಂತರದ ಪ್ರಯೋಜನಗಳನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT