ಚೀನಾದ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿರುವ ಮೂವರು ಗಗನಯಾನಿಗಳು

ಬೀಜಿಂಗ್ (ಪಿಟಿಐ): ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ಕೇಂದ್ರಕ್ಕೆ ಚೀನಾ ಮಂಗಳವಾರ ಮೂವರು ಗಗನಯಾತ್ರಿಗಳನ್ನು ಕಳುಹಿಸಲಿದೆ. ಇದೇ ವೇಳೆ ಅದು ಮಾನವಸಹಿತ ಚಂದ್ರಯಾನ ಯೋಜನೆ ಕುರಿತು ಘೋಷಣೆ ಮಾಡಲಿದೆ.
ಫೈ ಜುನ್ಲಾಂಗ್, ಡೆಂಗ್ ಕ್ವಿಂಗ್‌ಮಿಂಗ್ ಮತ್ತು ಝಾಂಗ್ ಲು ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೂವರು ಗಗನಯಾತ್ರಿಗಳು.
‘ಗಗನಯಾತ್ರಿಗಳನ್ನು ಹೊತ್ತ ಶೆಂಝೌ–15 ಬಾಹ್ಯಾಕಾಶ ನೌಕೆಯು ವಾಯವ್ಯ ಚೀನಾದ ಜಿಯುಕ್ವಾನ್‌ನಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ತೆರಳಲಿದೆ’ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.