ಶುಕ್ರವಾರ, ಜೂನ್ 25, 2021
29 °C

ದಕ್ಷಿಣ ಚೀನಾ ಭಾಗದಸಮುದ್ರದಲ್ಲಿ ನೌಕಾಪಡೆ ಚಟುವಟಿಕೆ:ಅಮೆರಿಕ–ಚೀನಾ ವಾಗ್ವಾದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್ (ಎ.ಪಿ): ದಕ್ಷಿಣ ಚೀನಾದ ಸಮುದ್ರ ಭಾಗದಲ್ಲಿ ಅಮೆರಿಕದ ನೌಕಾಪಡೆಯು ಚಟುವಟಿಕೆ ಕೈಗೊಂಡಿದೆ ಎಂದು ಚೀನಾ ಗುರುವಾರ ಪ್ರತಿಭಟಿಸಿದೆ. ಇತ್ತೀಚಿನ ದಿನಗಳಲ್ಲಿ ಇದು ಚೀನಾದ ಎರಡನೇ ಪ್ರತಿಭಟನೆ. ಇದಕ್ಕೆ ಅಮೆರಿಕದ ಸೆವೆಂತ್‌ ಫ್ಲೀಟ್‌ ಆಕ್ಷೇಪಿಸಿದೆ. ನೆರೆ ದೇಶ ತನ್ನ ಸಮುದ್ರಯಾನದ ಹಕ್ಕಿಗೆ ಧಕ್ಕೆತರುತ್ತಿದೆ ಎಂದಿದೆ.

ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿ ಸದರರ್ನ್ ಥಿಯೇಟರ್‌ ಕಮ್ಯಾಂಡ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಮೆರಿಕದ ಕ್ಷಿಪಣಿ ನಾಶಕವಾದ ಯುಎಸ್ಎಸ್‌ ಕರ್ಟಿಸ್‌ ವಿಲ್ಬರ್‌ ‘ಅನಧಿಕೃತ’ವಾಗಿ ತನ್ನ ಪರಿಧಿಯನ್ನು ಪ್ರವೇಶಿಸಿದೆ. ಚೀನಾದ ಸೇನೆ ಸುತ್ತುವರಿದಿದ್ದು, ಉಚ್ಚಾಟಿಸುವ ಕಟು ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿಸಿದೆ.

ಅಮೆರಿಕವು ಪ್ರಾದೇಶಿಕ ಭದ್ರತೆಗೆ ಧಕ್ಕೆತರುತ್ತಿದ್ದು, ಅವಘಡ, ಅಪನಂಬಿಕೆಗಳಿಗೆ ಆಸ್ಪದವಾಗುತ್ತಿದೆ. ಅಮೆರಿಕದ ಹಡಗಿನ ಪ್ರವೇಶ ಬೇಜವಾಬ್ದಾರಿಯುತವಾಗಿದ್ದು, ವೃತ್ತಿಪರತೆಗೆ ವಿರುದ್ಧವಾಗಿದೆ. ದೇಶದ ಸೇನೆ ಸಾರ್ವಭೌಮತೆಯ ರಕ್ಷಣೆಗೆ ಬದ್ಧವಾಗಿದ್ದು, ದಕ್ಷಿಣ ಚೀನಾದ ಸಮುದ್ರ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಒತ್ತು ನೀಡಿವೆ ಎಂದಿದೆ.

ಚೀನಾದ ಹೇಳಿಕೆಯನ್ನು ಅಮೆರಿಕ ತಳ್ಳಿಹಾಕಿದೆ. ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ನಿಯಮಿತವಾಗಿ ಚಟುವಟಿಕೆ ನಡೆಯುತ್ತಿದೆ. ಇದು, ಅಂತರರಾಷ್ಟ್ರೀಯ ಜಲದಲ್ಲಿ ಚಟುವಟಿಕೆ ನಡೆಸುವ ಹಕ್ಕಾಗಿದೆ ಎಂದು ಹೇಳಿದೆ.

ಸುದೀರ್ಘ ವಿವರಣೆ ನೀಡಿರುವ ಸೆವೆಂತ್‌ ಫ್ಲೀಟ್, ಈ ಚಟುವಟಿಕೆಯು ತನ್ನ ಸ್ವಾತಂತ್ರ್ಯ ಹಾಗೂ  ಕಾನೂನುಬದ್ಧ ಬಳಕೆಯನ್ನು ಎತ್ತಿಹಿಡಿಯಲಿದೆ. ಈ ಪ್ರದೇಶವು ಅಂತರರಾಷ್ಟ್ರೀಯ ಕಾನೂನಿನಡಿ ಗುರುತಿಸಲಾದ ಸಮುದ್ರ ಭಾಗವಾಗಿದೆ ಎಂದು ಪ್ರತಿಪಾದಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು