ಮಂಗಳವಾರ, ಜನವರಿ 26, 2021
28 °C
ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ಅಕ್ರಮ ಪ್ರವೇಶ ಯತ್ನ

ಲಡಾಖ್‌ ಗಡಿಯಲ್ಲಿ ಚೀನಾ ಸೈನಿಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ನ ಪಾಗೋಂಗ್ ಸರೋವರದ ದಕ್ಷಿಣ ಭಾಗದಿಂದ ವಾಸ್ತವ ಗಡಿ ನಿಯಂತ್ರಣ ರೇಖೆ ದಾಟಿ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದ ಚೀನಾದ ಪೀಪಲ್ ಲಿಬರೇಷನ್ ಅರ್ಮಿ (ಪಿಎಲ್‌ಎ) ಸೈನಿಕನನ್ನು ಭಾರತೀಯ ಸೇನಾ ಪಡೆಗಳು ಶುಕ್ರವಾರ ಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.

ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರು, ಚೀನಿ ಸೈನಿಕನನ್ನು ವಶಕ್ಕೆ ‍ಪಡೆದಿದ್ದು, ವಾಸ್ತವ ಗಡಿ ನಿಯಂತ್ರಣ ರೇಖೆ ದಾಟಿದ ಕಾರ್ಯವಿಧಾನಗಳು ಮತ್ತು ಸನ್ನಿವೇಶಗಳ ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನಲ್ಲಿ ಎಂಟು ತಿಂಗಳಿನಿಂದ ಎರಡೂ ದೇಶಗಳ ನಡುವೆ ಗಡಿ ವಿವಾದ ಉಂಟಾಗಿದ್ದು, ಇದರ ನಡುವೆಯೇ ಚೀನಾ ಸೈನಿಕನನ್ನು ಭಾರತ ಸೆರೆಹಿಡಿದಿದೆ.

ಕಳೆದ ವರ್ಷ ಚೀನಾ ತನ್ನ ಸೇನೆಯೊಂದಿಗೆ ಗಡಿ ಭಾಗದಲ್ಲಿ ಕ್ಯಾತೆ ತೆಗೆದ ನಂತರ ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಎರಡೂ ದೇಶಗಳು ಸೇನೆಯನ್ನು ನಿಯೋಜಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು