ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಡನಾಡಿ’ಗೆ ಚಿತ್ರದುರ್ಗ ಪೊಲೀಸರ ‘ಅಕ್ರಮ ಪ್ರವೇಶ’

ಪೊಲೀಸ್‌ ಭಯೋತ್ಪಾದನೆ: ಪರಶುರಾಂ ಆರೋಪ
Last Updated 30 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಮೈಸೂರು: ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿರುವ ಬಾಲಕಿಯರು ಹಾಗೂ ತಾಯಿಗೆ ಆಶ್ರಯ ನೀಡಿರುವ ಇಲ್ಲಿನ ಒಡನಾಡಿ ಸೇವಾ ಸಂಸ್ಥೆಗೆ
ಚಿತ್ರದುರ್ಗದ ಪೊಲೀಸರ ತಂಡವೊಂದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರದೆ ಅಕ್ರಮವಾಗಿ ಬುಧವಾರ ಪ್ರವೇಶಿಸಿದೆ.

‘ಯಾವುದೇ ಮಕ್ಕಳ ಪಾಲನಾ ಸಂಸ್ಥೆಗೆ ಭೇಟಿ ನೀಡುವ ಮುನ್ನ ಮಕ್ಕಳ ಕಲ್ಯಾಣ ಸಮಿತಿಯ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಪೊಲೀಸರು ಉಲ್ಲಂಘಿಸಿದ್ದಾರೆ’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಪೊಲೀಸರು ಮಧ್ಯಾಹ್ನ 12.25ರ ವೇಳೆಗೆ ಸಂಸ್ಥೆಯೊಳಕ್ಕೆ ಪ್ರವೇಶಿಸುವ ವಿಡಿಯೊಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಸಂಸ್ಥೆಗೆ ಭೇಟಿ ನೀಡುವಕುರಿತು ಯಾವುದೇ ಮುನ್ಸೂಚನೆ ನೀಡದೆ, ಕನಿಷ್ಠ ನೋಟಿಸ್‌ ಅನ್ನೂ ನೀಡದೆ
ಬಂದು ತಪಾಸಣೆಗೆ ಯತ್ನಿಸಿದ್ದು ಪೊಲೀಸ್‌ ಭಯೋತ್ಪಾದನೆ’ ಎಂದು ಪರಶುರಾಂ ತಿಳಿಸಿದ್ದಾರೆ.

‘ಚಿತ್ರದುರ್ಗದ ಮಕ್ಕಳನ್ನು ತನಿಖೆಗಾಗಿ ಕರೆದೊಯ್ಯಲು ಬಂದಿದ್ದೇವೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಸಮಿತಿ ಕಚೇರಿ ಎಂದು ಭಾವಿಸಿ ಬಂದಿರುವುದಾಗಿ ಮತ್ತೊಮ್ಮೆ ಹೇಳಿ, ಸಮರ್ಪಕ ವಿವರಣೆ ನೀಡದೆ ಗೊಂದಲ ಮೂಡಿಸಿದರು. ಸ್ಥಳೀಯ ಪೊಲೀಸರನ್ನೂ ಜೊತೆಗೆ ಕರೆತಂದಿರ ಲಿಲ್ಲ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT