ಗುರುವಾರ , ಆಗಸ್ಟ್ 11, 2022
27 °C

ಸಿಜೆಐ ತಾಯಿಗೆ ₹2.5 ಕೋಟಿ ವಂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗ್ಪುರ: ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಶರದ್‌ ಅರವಿಂದ ಬೊಬಡೆ ಅವರ ತಾಯಿಗೆ, ಅವರ ಕುಟುಂಬದ ಆಸ್ತಿಯೊಂದನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೇ ₹2.5 ಕೋಟಿ ವಂಚನೆ ಎಸಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.

ಆರೋಪಿ, 49 ವರ್ಷದ ತಪಸ್‌ ಘೋಷ್‌ ಎಂಬುವವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಡಿಸಿಪಿ ವಿನಿತಾ ಸಾಹು ಅವರ ನೇತೃತ್ವದಲ್ಲಿ ನಾಗ್ಪುರ ಪೊಲೀಸರ ವಿಶೇಷ ತನಿಖಾ ತಂಡವು(ಎಸ್‌ಐಟಿ) ತನಿಖೆ ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಆಕಾಶವಾಣಿ ಸ್ಕ್ವ್ಯಾರ್‌ ಸಮೀಪ ಬೊಬಡೆ ಕುಟುಂಬವು ‘ಸೀಡನ್‌ ಲಾನ್‌’ ಆಸ್ತಿಯನ್ನು ಹೊಂದಿದ್ದು, ಇದನ್ನು ಹಲವು ಕಾರ್ಯಕ್ರಮಕ್ಕಾಗಿ ಬಾಡಿಗೆ ನೀಡಲಾಗುತ್ತಿದೆ. ತೊಂಬತ್ತರ ವಯಸ್ಸಿನ ಮುಕ್ತಾ ಬೊಬಡೆ ಅವರು ಇದರ ಮಾಲೀಕರಾಗಿದ್ದು, ಕುಟುಂಬವು, ಫ್ರೆಂಡ್ಸ್‌ ಕಾಲೊನಿಯ ಘೋಷ್‌ ಅವರನ್ನು ಆಸ್ತಿ ನೋಡಿಕೊಳ್ಳಲು ನೇಮಿಸಿತ್ತು.’

‘ಕಳೆದ ಹತ್ತು ವರ್ಷದಿಂದ ಆಸ್ತಿಯನ್ನು ನೋಡಿಕೊಳ್ಳುತ್ತಿರುವ ಘೋಷ್‌, ಅಲ್ಲಿ ನಡೆದ ಕಾರ್ಯಕ್ರಮಗಳ ಹಣಕಾಸು ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದರು. ಮುಕ್ತಾ ಬೊಬಡೆ ಅವರಿಗೆ ವಯಸ್ಸಾಗಿರುವುದನ್ನು ದುರುದ್ದೇಶಕ್ಕಾಗಿ ಬಳಸಿಕೊಂಡ ಘೋಷ್‌, ಬಾಡಿಗೆಯ ಮೊತ್ತದಲ್ಲಿ ವಂಚನೆ ಎಸಗುತ್ತಿದ್ದರು. ಘೋಷ್‌ ಹಾಗೂ ಅವರ ಪತ್ನಿ, ಸಂಗ್ರಹವಾದ ಎಲ್ಲ ಬಾಡಿಗೆ ಮೊತ್ತವನ್ನು ಬೊಬಡೆ ಕುಟುಂಬಕ್ಕೆ ಸಲ್ಲಿಸುತ್ತಿರಲಿಲ್ಲ. ₹2.5 ಕೋಟಿಗಿಂತ ಅಧಿಕ ವಂಚನೆ ಎಸಗಿರುವ ಸಂಶಯವಿದ್ದು ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿ ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು