ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ಯುದ್ಧನೌಕೆ: ನೌಕಾಪಡೆ ಜತೆಗೆ ಒಪ್ಪಂದ

Last Updated 1 ಏಪ್ರಿಲ್ 2023, 13:07 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಭಾರತ ನೌಕಾಪಡೆ ಜೊತೆ ಕೊಚ್ಚಿನ್‌ ಶಿಪ್‌ಯಾರ್ಡ್‌ ಸಂಸ್ಥೆಯು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಅಂದರಂತೆ ₹9,805 ಕೋಟಿ ವೆಚ್ಚದಲ್ಲಿ ಮುಂದಿನ ತಲೆಮಾರಿನ ಕ್ಷಿಪಣಿ ಉಡಾವಣಾ ಯುದ್ಧನೌಕೆಗಳನ್ನು (ಎನ್‌ಜಿಎಂವಿ) ಸಂಸ್ಥೆಯು ನೌಕಾಪಡೆಗೆ ನಿರ್ಮಿಸಿಕೊಡಲಿದೆ. 2027ರಿಂದ ಈ ನೌಕೆಗಳ ಹಸ್ತಾಂತರ ಆರಂಭವಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಒಪ್ಪಂದದಿಂದಾಗಿ ಕೇರಳ ರಾಜ್ಯ ಸರ್ಕಾರ ಸ್ವಾಮ್ಯದ ಕೊಚ್ಚಿನ್‌ ಶಿಪ್‌ಯಾರ್ಡ್‌ ಅತ್ಯಾಧುನಿಕ ಶಸ್ತ್ರಾಸ್ತ್ರ ಅಭಿವೃದ್ಧಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿತು ಎಂದು ಸಂಸ್ಥೆ ಹೇಳಿದೆ. ಶತ್ರು ಯುದ್ಧನೌಕೆಗಳು ಮತ್ತು ಭೂಮಿಯಿಂದ ನಡೆಸುವ ದಾಳಿಯನ್ನು ಈ ನೌಕೆಗಳು ಹಿಮ್ಮೆಟ್ಟಲಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಎನ್‌ಜಿಎಂವಿಗಳು ಸದ್ದಿಲ್ಲದೆ ಸಾಗುವ, ಹೆಚ್ಚು ವೇಗದ, ಆಕ್ರಮಣಕಾರಿ ಗುಣದ ಮತ್ತು ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಯುದ್ಧನೌಕೆಗಳು. ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸುವ, ಕಡಲ ಒಳಗೆ ಯುದ್ಧ ಕಾರ್ಯಾಚರಣೆ ನಡೆಸುವ ಮತ್ತು ದೇಶದ ಕರಾವಳಿ ಗಡಿಯೊಳಗೆ ನುಸುಳುವ ಶತ್ರು ನೌಕೆಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಇವು ಹೊಂದಿರುತ್ತವೆ’ ಎಂದು ಸಂಸ್ಥೆ ಹೇಳಿದೆ.

ದೇಶೀಯವಾಗಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾದ ಯುದ್ಧವಿಮಾನ ನೌಕೆ ಐಎನ್‌ಎಸ್‌ ವಿಕ್ರಾಂತ್‌ಅನ್ನು ಹಸ್ತಾಂತರಿಸಿದ ಬಳಿಕ ಎನ್‌ಜಿಎಂವಿಯನ್ನು ಹಸ್ತಾಂತರಿಸಲು ಸಂಸ್ಥೆಯು ಉತ್ಸುಕವಾಗಿದೆ ಎಂದು ಸಂಸ್ಥೆಯು ಹೇಳಿದೆ.

ಎನ್‌ಜಿಎಂವಿ ಜೊತೆ ಎಂಟು ಜಲಾಂತರ್ಗಾಮಿ ನಾಶಕ ನೌಕೆಗಳನ್ನೂ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT