ಗುರುವಾರ , ಮೇ 13, 2021
34 °C

ವಿದೇಶಿ ರಾಯಭಾರ ಕಚೇರಿಗೆ ಆಮ್ಲಜನಕ ಸಿಲಿಂಡರ್‌: ಕೇಂದ್ರ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫಿಲಿಪ್ಪೀನ್ಸ್‌ ರಾಯಭಾರ ಕಚೇರಿ ಹಾಗೂ ನ್ಯೂಜಿಲೆಂಡ್‌ ಹೈಕಮಿಷನ್‌ ಕಚೇರಿಗೆ ಯೂಥ್‌ ಕಾಂಗ್ರೆಸ್‌ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಕೆ ಮಾಡಿರುವುದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಬಿ.ವಿ. ಶ್ರೀನಿವಾಸ್‌ ಅಧ್ಯಕ್ಷರಾಗಿರುವ ಯೂಥ್‌ ಕಾಂಗ್ರೆಸ್‌ನ ಈ ನಡೆಯನ್ನು ಖಂಡಿಸಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

‘ಫಿಲಿಪ್ಪೀನ್ಸ್‌ ರಾಯಭಾರ ಕಚೇರಿಯಲ್ಲಿ ಯಾರೂ ಕೋವಿಡ್‌ನಿಂದ ಬಳಲುತ್ತಿಲ್ಲ. ಆ ಕಚೇರಿಗೆ ಆಮ್ಲಜನಕ ಸಿಲಿಂಡರ್‌ ನೀಡಿರುವ ಯೂಥ್‌ ಕಾಂಗ್ರೆಸ್‌ನ ನಡೆ ಅನಪೇಕ್ಷಿತ ಹಾಗೂ ಪ್ರಚಾರಕ್ಕಾಗಿ ಮಾಡಿದ ಯತ್ನ’ ಎಂದು ಸಚಿವ ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ, ಪಕ್ಷದ ಯುವ ಘಟಕ ಮಾಡಿದ ಕಾರ್ಯವನ್ನು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಜೈರಾಮ್‌ ರಮೇಶ್‌, ‘ರಾಯಭಾರ ಕಚೇರಿಗಳ ಸಂಕಷ್ಟಕ್ಕೆ ಯೂಥ್‌ ಕಾಂಗ್ರೆಸ್‌ ಸ್ಪಂದಿಸಿದೆ. ವಿದೇಶಾಂಗ ಸಚಿವಾಲಯ ನಿದ್ದೆ ಮಾಡುತ್ತಿದೆ’ ಎಂದು ಪ್ರಶ್ನಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು