ಮಂಗಳವಾರ, ಜೂನ್ 15, 2021
21 °C

ಕರ್ತವ್ಯದ ಬಳಿಕ ಸಮಾಲೋಚನೆ: ಕೇಂದ್ರದ ವೈದ್ಯರಿಗೆ ಅನುಮತಿ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ತಮ್ಮ ಅಧಿಕೃತ ಕರ್ತವ್ಯದ ಅವಧಿಯ ಬಳಿಕ ರೋಗಿಗಳಿಗೆ ಔಷಧ ನೀಡುವುದು ಅಥವಾ ದೂರವಾಣಿ ಸಮಾಲೋಚನೆ ಒದಗಿಸುವುದಕ್ಕೆ ಪೂರ್ವಾನುಮತಿ ಪಡೆಯುವ ಅಗತ್ಯ ಇಲ್ಲ. ಕೋವಿಡ್‌–19ರ ಕಾರಣದಿಂದ ವೈದ್ಯರ ಕೊರತೆ ಇದೆ ಮತ್ತು ರೋಗಿಗಳಿಗೆ ವೈದ್ಯರು ಸಿಗುತ್ತಿಲ್ಲ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಆದೇಶ ಹೊರಡಿಸಿದೆ. 

ಸಾಂಕ್ರಾಮಿಕದ ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕೆಲಸ ಮಾಡುವ ವೈದ್ಯರು ಅವರ ಕೆಲಸದ ಅವಧಿಯ ಬಳಿಕವೂ ಸಮಾಲೋಚನೆಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು.

ಆದರೆ, ಈ ಸೇವೆಗಳಿಗೆ ವೈದ್ಯರು ಶುಲ್ಕ ಪಡೆಯುವಂತಿಲ್ಲ. ಪೂರ್ಣವಾಗಿ ಇದು ಸೇವೆಯ ರೂಪದಲ್ಲಿಯೇ ಇರಬೇಕು ಎಂದು ಆದೇಶವು ಸ್ಪಷ್ಟಪಡಿಸಿದೆ. 

ಹೀಗೆ ಒದಗಿಸಿದ ಸೇವೆಯ ಬಗ್ಗೆ ತಮ್ಮ ಇಲಾಖೆಗೆ ವೈದ್ಯರು  ಮಾಹಿತಿ ನೀಡುವುದು ಉತ್ತಮ. ಇದು ದಾಖಲಾತಿ ನಿರ್ವಹಣೆಯ ಉದ್ದೇಶಕ್ಕಾಗಿ ಮಾತ್ರ ಎಂದು ಆದೇಶದಲ್ಲಿ ಹೇಳಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು