ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | 4 ಲಕ್ಷ ಜನರಿಗೆ ಕೋವಿಡ್ ದೃಢ: ಒಂದೇ ದಿನ 3,467 ಸಾವು

Last Updated 1 ಮೇ 2021, 3:38 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ರುದ್ರನರ್ತನ ಅವ್ಯಾಹತವಾಗಿ ಮುಂದುವರಿದಿದ್ದು, ರಾಷ್ಟ್ರದಾದ್ಯಂತ ಶುಕ್ರವಾರ ಸೋಂಕಿಗೆ ಒಳಗಾದವರ ಸಂಖ್ಯೆ 4 ಲಕ್ಷ ದಾಟಿದೆ.

ಒಟ್ಟು 4,01,837 ಜನರಲ್ಲಿ ಈ ವೇಳೆ ಸೋಂಕು ದೃಢಪಟ್ಟಿದ್ದು, ಒಟ್ಟು 3,467 ಜನ ಪ್ರಾಣ ಕಳೆದುಕೊಂಡಿದ್ದಾರೆ. 2,97,698 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಹಾವಳಿ ಮಿತಿ ಮೀರಿದ್ದು, ಶುಕ್ರವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 27.047 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಪರೀಕ್ಷೆಗೆ ಒಳಪಟ್ಟಿರುವ 82,745 ಜನರ ಪೈಕಿ ಶೇ 32.69ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇದೇ ಅವಧಿಯಲ್ಲಿ 375 ಜನ ಸಾವಿಗೀಡಾಗಿದ್ದಾರೆ. 25,288 ಜನ ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿ ಇದುವರೆಗೆ ಒಟ್ಟು 11,49,333 ಜನರಿಗೆ ಸೊಂಕು ತಗುಲಿದ್ದು, 10,33,825 ಜನರು ಗುಣಮುಖರಾಗಿದ್ದಾರೆ. 16,147 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ 99,361 ಸಕ್ರಿಯ ಪ್ರಕರಣಗಳಿವೆ.

ಕೊರೊನಾ ತಡೆಗಾಗಿ ಲಾಕ್‌ಡೌನ್‌ ಘೋಷಿಸಿ ಶುಕ್ರವಾರಕ್ಕೆ ಎರಡು ವಾರ ಪೂರ್ಣಗೊಂಡಿದೆ. ಆದರೂ ಸೋಂಕಿಗೆ ಒಳಗಾಗುವವರ ಶೇಕಡಾವಾರು ಪ್ರಮಾಣ ಹಾಗೂ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT