ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಶೇ.76.47 ರಷ್ಟು ಕೋವಿಡ್–19 ಸೋಂಕಿತರು ಗುಣಮುಖ

Last Updated 29 ಆಗಸ್ಟ್ 2020, 17:11 IST
ಅಕ್ಷರ ಗಾತ್ರ

ನವದೆಹಲಿ:ದೇಶದಾದ್ಯಂತ ಕೋವಿಡ್‌–19 ಸೋಂಕು ಪ್ರಕರಣಗಳು ಏರುತ್ತಲೇ ಸಾಗಿದ್ದು,ಇದುವರೆಗೆ ಒಟ್ಟು 4.04 ಕೋಟಿ ಜನರಿಗೆ ಕೋವಿಡ್‌–19 ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆಮಂಡಳಿ (ಐಸಿಎಂಆರ್‌) ಮಾಹಿತಿ ನೀಡಿದೆ.

‘ನಿನ್ನೆ ನಡೆಸಲಾಗಿರುವ 9,28,761 ಪರೀಕ್ಷೆ ಸೇರಿದಂತೆ ಆಗಸ್ಟ್‌ 28ರ ವರೆಗೆ ಒಟ್ಟು 4,04,06,609 ಮಾದರಿ ಪರೀಕ್ಷೆಯನ್ನು ನಡೆಸಲಾಗಿದೆ’ ಎಂದು ಟ್ವಿಟರ್‌‌ ಮೂಲಕ ತಿಳಿಸಿದೆ.

ದೇಶದಲ್ಲಿ ಇದುವರೆಗೆ 35 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ26ಕ್ಕೂ ಹೆಚ್ಚುಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿಚೇತರಿಕೆ ಪ್ರಮಾಣ ಶೇ. 76.47ಕ್ಕೆ ಏರಿಕೆಯಾಗಿದೆ.ಸಾವಿನ ದರಶೇ.1.81ಕ್ಕೆ ಇಳಿದಿದೆ.

ಕರ್ನಾಟಕದಲ್ಲಿ 3.27 ಲಕ್ಷ ಪ್ರಕರಣ
ಕರ್ನಾಟಕದಲ್ಲಿ ಇಂದು 8,324 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶನಿವಾರ 8,110 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಗುಣಮುಖರಾದವರ ಸಂಖ್ಯೆ 2,35,128ಕ್ಕೆ ಏರಿದೆ.5,483 ಮಂದಿ ಮೃತಪಟ್ಟಿದ್ದಾರೆ.

ಪಂಜಾಬ್‌ನಲ್ಲಿ 1,474 ಹೊಸ ಪ್ರಕರಣ
ಪಂಜಾಬ್‌ನಲ್ಲಿ ಇಂದು ಒಟ್ಟು 1,474 ಹೊಸ ಪ್ರಕರಣಗಳು ವರದಿಯಾಗಿವೆ. 1,083 ಮಂದಿ ಚೇತರಿಸಿಕೊಂಡಿದ್ದು, 41 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದರೊಂದಿಗೆ ಪಂಜಾಬ್‌ನಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 50,848ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,348ಕ್ಕೆ ತಲುಪಿದೆ.

ಉತ್ತರ ಪ್ರದೇಶದಲ್ಲಿ 62 ಸಾವು
ಉತ್ತರ ಪ್ರದೇಶದಲ್ಲಿ ಒಂದೇದಿನ 62 ಜನರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಇಲ್ಲಿ ಸಾವಿನ ಸಂಖ್ಯೆ 3,356ಕ್ಕೆ ಏರಿಕೆಯಾಗಿದೆ. ಹೊಸದಾಗಿ 5,684 ಸೋಂಕು ಪ್ರಕರಣಗಳು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2.19 ಲಕ್ಷ ದಾಟಿದೆ.

ತಮಿಳುನಾಡಲ್ಲಿ 6,352 ಹೊಸ ಪ್ರಕರಣ
ತಮಿಳುನಾಡಿನಲ್ಲಿ ಇಂದು ಒಟ್ಟು 6,352 ಹೊಸ ಪ್ರಕರಣಗಳು ವರದಿಯಾಗಿದ್ದು, 87 ಮಂದಿ ಮೃತಪಟ್ಟಿದ್ದಾರೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ4,15,590 ಆಗಿದ್ದು,3,55,727 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 52,726 ಪ್ರಕರಣಗಳು ಸಕ್ರಿಯವಾಗಿವೆ.

ಚೆನ್ನೈ ಒಂದರಲ್ಲೇ 1,285 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 1,33,173 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ7,137ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT