ಭಾನುವಾರ, ಮೇ 16, 2021
22 °C

ಎರಡು ಬಾರಿ ರೂಪಾಂತರಗೊಂಡ ಕೊರೊನಾ ವೈರಸ್ ವಿರುದ್ಧವೂ ಕೊವ್ಯಾಕ್ಸಿನ್ ಪರಿಣಾಮಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Covaxin

ನವದೆಹಲಿ: ಎರಡೆರಡು ಬಾರಿ ರೂಪಾಂತರಗೊಂಡ ಕೊರೊನಾ ವೈರಸ್ (SARS-CoV-2) ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ತಿಳಿಸಿದೆ.

‘ಕೊವ್ಯಾಕ್ಸಿನ್‌ ಲಸಿಕೆಯು ಕೊರೊನಾ ವೈರಸ್‌ನ ಹಲವು ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ. ಜತೆಗೆ, ಎರಡೆರಡು ಬಾರಿ ರೂಪಾಂತರಗೊಂಡ ವೈರಸ್‌ ವಿರುದ್ಧವೂ ಪರಿಣಾಮಕಾರಿಯಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.

ಕೊವ್ಯಾಕ್ಸಿನ್ ಲಸಿಕೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಭಾರತ್‌ ಬಯೋಟೆಕ್ ಕಂಪನಿಯು ಐಸಿಎಂಆರ್‌ ಸಹಯೋಗದಲ್ಲಿ ಲಸಿಕೆಯ ಪ್ರಯೋಗ ನಡೆಸಿತ್ತು. ಲಸಿಕೆಯು ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ ವಿಶ್ಲೇಷಣೆ ವೇಳೆ ಶೇ 80.6ರಷ್ಟು ಪರಿಣಾಮಕಾರಿತ್ವ ತೋರಿದೆ ಎಂದು ಇತ್ತೀಚೆಗೆ ಭಾರತ್‌ ಬಯೋಟೆಕ್ ಹೇಳಿತ್ತು.

ಓದಿ: 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು