ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ: ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ಸ್ ಆರಂಭ

ನವದೆಹಲಿ: ಕೋವಿಡ್–19 ನಿಯಂತ್ರಣಕ್ಕಾಗಿ ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ ಭಾರತದಲ್ಲಿ ಇಂದು ಆರಂಭವಾಗಿದೆ.
ಎರಡು ಮತ್ತು ಮೂರನೇ ಹಂತದ ಪ್ರಯೋಗ ಆರಂಭಿಸಿರುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿ (ಆರ್ಡಿಐಎಫ್) ಮತ್ತು ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್ ಹೇಳಿಕೆ ನೀಡಿವೆ.
ರಷ್ಯಾ ಆಗಸ್ಟ್ 11ರಂದು ಕೋವಿಡ್–19 ಲಸಿಕೆ ನೋಂದಾಯಿಸಿಕೊಂಡಿತ್ತು. ಆ ಮೂಲಕ ಲಸಿಕೆ ನೋಂದಾಯಿಸಿಕೊಂಡ ಪ್ರಪಂಚದ ಮೊದಲ ದೇಶ ಎನಿಸಿಕೊಂಡಿತ್ತು. ರಷ್ಯಾದ ಗಮಲೆಯಾ ನ್ಯಾಷನಲ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಎಪಿಡೆಮಿಯೊಲಜಿ ಆ್ಯಂಡ್ ಮೈಕ್ರೊಬಯಾಲಜಿಯಲ್ಲಿ ‘ಸ್ಪುಟ್ನಿಕ್ ವಿ’ ಲಸಿಕೆ ಅಭಿವೃದ್ಧಿಪಡಿಸಲಾಗಿದೆ..
ಸ್ಪುಟ್ನಿಕ್ ವಿ ಲಸಿಕೆ ಕೋವಿಡ್ಗೆ ಶೇ.92ರಷ್ಟು ಪರಿಣಾಮಕಾರಿ ಆಗಿದೆ ಎಂದು ಆರ್ಡಿಐಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.