ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ‘ಎಂ–ಆರ್‌ಎನ್‌ಎ’ ಲಸಿಕೆ ಕ್ಲಿನಿಕಲ್‌ ಟ್ರಯಲ್‌ಗೆ ಡಿಸಿಜಿಐ ಅನುಮತಿ

Last Updated 24 ಆಗಸ್ಟ್ 2021, 15:11 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಅಭಿವೃದ್ಧಿಪಡಿಸಿರುವ, ಕೋವಿಡ್‌ ವಿರುದ್ಧದ ಮೊದಲ ‘ಎಂ–ಆರ್‌ಎನ್‌ಎ’ ಆಧರಿತ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕರ (ಡಿಸಿಜಿಐ) ಅನುಮತಿ ದೊರೆತಿದೆ.

ಬಯೋಟೆಕ್ನಾಲಜಿ ಇಲಾಖೆ (ಡಿಬಿಟಿ) ನೆರವಿನೊಂದಿಗೆ ಪುಣೆ ಮೂಲದ ಜಿನ್ನೋವಾ ಬಯೋಫಾರ್ಮಾಸ್ಯೂಟಿಕಲ್ಸ್‌ ಲಿಮಿಟೆಡ್‌ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

10–15 ಸ್ಥಳಗಳಲ್ಲಿ ಎರಡನೇ ಹಂತದ ಟ್ರಯಲ್‌ ನಡೆಸಲಾಗುವುದು. 3ನೇ ಹಂತದ ಟ್ರಯಲ್‌ 22–27 ಸ್ಥಳಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

‘ಎಂ–ಆರ್‌ಎನ್‌ಎ ಆಧರಿತ ಲಸಿಕೆಯಲ್ಲಿ ಸಾಕಷ್ಟು ಅನುಕೂಲಗಳಿವೆ. ಕೊರೊನಾ ವೈರಸ್‌ನ ಹೊಸ ತಳಿ ಕಂಡ ಬಂದರೆ, ಬಹಳ ಕಡಿಮೆ ಸಮಯದಲ್ಲಿಯೇ ಹೊಸ ಲಸಿಕೆಯನ್ನು ತಯಾರಿಸಲು ಸಾಧ್ಯವಿದೆ’ ಎಂದು ರೀಜನಲ್‌ ಸೆಂಟರ್‌ ಆಫ್‌ ಬಯೋಟೆಕ್ನಾಲಜಿಯ ಕಾರ್ಯಕಾರಿ ನಿರ್ದೇಶಕ ಸುಧಾಂಶು ವ್ರತಿ ಹೇಳಿದರು.

‘ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆ ಸುರಕ್ಷಿತ ಹಾಗೂ ಕೋವಿಡ್‌ ವಿರುದ್ಧ ಪರಿಣಾಮಕಾರಿಯಾಗಿ ರಕ್ಷಣೆ ನೀಡಲಿದೆ ಎಂಬುದು ಹೆಮ್ಮೆಯ ವಿಷಯ. ಲಸಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲು. ಜಾಗತಿಕ ಭೂಪಟದಲ್ಲಿ ಭಾರತಕ್ಕೂ ಸ್ಥಾನ ಸಿಗಲಿದೆ’ ಎಂದು ಡಿಬಿಟಿ ಕಾರ್ಯದರ್ಶಿ ರೇಣು ಸ್ವರೂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT