ಶುಕ್ರವಾರ, ಮೇ 20, 2022
19 °C

ಕೋವಿಡ್: ಕೇರಳದಲ್ಲಿ ಪರೀಕ್ಷೆಯೂ ಹೆಚ್ಚು, ಪ್ರಕರಣವೂ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದಲ್ಲಿ ಈಗ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ರಾಜ್ಯದ ಜನತೆಗೆ ಹೋಲಿಸಿದರೆ ಕೇರಳವು ಪ್ರತಿದಿನ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆ. ಕೇರಳದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 90 ಸಾವಿರದಷ್ಟು ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಹೀಗಾಗಿ ಕೋವಿಡ್‌ ದೃಢಪಡುವ ಪ್ರಮಾಣವೂ ಅತ್ಯಧಿಕವಾಗಿದೆ.

ಲಕ್ಷಕ್ಕೆ 90 ಸಾವಿರ ಪರೀಕ್ಷೆ

ರಾಜ್ಯ;ಪ್ರತಿ ಲಕ್ಷ ಜನತೆಯಲ್ಲಿ ಪರೀಕ್ಷೆಗೆ ಒಳಪಟ್ಟವರು;ಪ್ರತಿ ಲಕ್ಷದಲ್ಲಿ ಕೋವಿಡ್ ದೃಢಪಟ್ಟವರು

ಕೇರಳ; 89,040;11,409

ಮಹಾರಾಷ್ಟ್ರ;43,928;5,285

ಕರ್ನಾಟಕ; 65,647;4,479

ತಮಿಳುನಾಡು; 55,506;3,450

ಉತ್ತರ ಪ್ರದೇಶ; 31,984;759

* ಕೇರಳದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 89,040 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರತಿ ಒಂದು ಲಕ್ಷದಲ್ಲಿ 11.409 ಜನರಿಗೆ ಕೋವಿಡ್ ದೃಢಪಟ್ಟಿದೆ. ಪ್ರತಿ ಲಕ್ಷ ಜನರಲ್ಲಿ ಕೇವಲ 43,928 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿರುವ ಮಹಾರಾಷ್ಟ್ರದಲ್ಲಿ, ಪ್ರತಿ ಒಂದು ಲಕ್ಷದಲ್ಲಿ 5,285 ಜನರಲ್ಲಿ ಮಾತ್ರ ಕೋವಿಡ್ ದೃಢಪಡುತ್ತಿದೆ. ಉತ್ತರ ಪ್ರದೇಶದಲ್ಲಿ ಈ ಎರಡೂ ಸಂಖ್ಯೆ ಅತ್ಯಂತ ಕಡಿಮೆ ಇದೆ. ಜನಸಂಖ್ಯೆಗೆ ಹೋಲಿಸಿದರೆ ಉಳಿದ ರಾಜ್ಯಗಳಲ್ಲಿ ಕಡಿಮೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಹೆಚ್ಚಿನ ಮಂದಿ ಕೋವಿಡ್‌ ಪರೀಕ್ಷೆಗೇ ಒಳಪಟ್ಟಿಲ್ಲ

ಪರೀಕ್ಷೆಗಳು (7 ದಿನಗಳ ಸರಾಸರಿ)

ರಾಜ್ಯ;ಆಗಸ್ಟ್ 01;ಆ.08;ಆ.15;ಆ.22;ಆ.29

ಕೇರಳ;1.62 ಲಕ್ಷ;1.60 ಲಕ್ಷ;1.34 ಲಕ್ಷ;1.10 ಲಕ್ಷ;1.48 ಲಕ್ಷ

ಮಹಾರಾಷ್ಟ್ರ;1.91 ಲಕ್ಷ;1.97 ಲಕ್ಷ;1.98 ಲಕ್ಷ;1.90 ಲಕ್ಷ;1.95 ಲಕ್ಷ

ಕರ್ನಾಟಕ;1.36 ಲಕ್ಷ;1.48 ಲಕ್ಷ;1.52 ಲಕ್ಷ;1.50 ಲಕ್ಷ;1.75 ಲಕ್ಷ

ತಮಿಳುನಾಡು;1.52 ಲಕ್ಷ;1.56 ಲಕ್ಷ;1.60 ಲಕ್ಷ;1.55 ಲಕ್ಷ;1.58 ಲಕ್ಷ

ಉತ್ತರ ಪ್ರದೇಶ;2.42 ಲಕ್ಷ;2.46 ಲಕ್ಷ;1.98 ಲಕ್ಷ;2.44 ಲಕ್ಷ;1.97 ಲಕ್ಷ

* ಕಡಿಮೆ ಜನಸಂಖ್ಯೆ ಇರುವ ಕೇರಳದಲ್ಲಿ ಪ್ರತಿದಿನ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆಸುತ್ತಿರುವಷ್ಟೇ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಕಡಿಮೆ ಸಂಖ್ಯೆ ಪ್ರಕರಣಗಳಷ್ಟೇ ದೃಢಪಡುತ್ತಿವೆ. ಆದರೆ ಕೇರಳದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಯಾವ ರಾಜ್ಯವೂ ಪ್ರತಿದಿನ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗಳು ಮತ್ತು ಪ್ರತಿಕಾಯ ಪರೀಕ್ಷೆಗಳ ಪ್ರಮಾಣ ಎಷ್ಟು ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಎರಡೂ ಪರೀಕ್ಷೆಗಳ ನಿಖರತೆಯಲ್ಲಿ ವ್ಯತ್ಯಾಸವಿರುವ ಕಾರಣ ರಾಜ್ಯಗಳು ನಡೆಸುತ್ತಿರುವ ಪರೀಕ್ಷೆಗಳು ಮತ್ತು ಕೋವಿಡ್ ದೃಢತೆ ಪ್ರಮಾಣದ ನಡುವಣ ತುಲನೆ ವೈಜ್ಞಾನಿಕವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಲಸಿಕೆ: ಈವರೆಗಿನ ಪ್ರಗತಿ

ಕೋವಿಡ್‌ ಲಸಿಕೆ ನೀಡಿಕೆ (ಕನಿಷ್ಠ ಒಂದು ಡೋಸ್)

ಕೇರಳ; 58

ಮಹಾರಾಷ್ಟ್ರ; 33.8

ಕರ್ನಾಟಕ; 46.2

ತಮಿಳುನಾಡು; 32.7

ಉತ್ತರ ಪ್ರದೇಶ; 26.2

ದೇಶ; 36.6

 ಕೋವಿಡ್‌ ಲಸಿಕೆ ನೀಡಿಕೆ (ಸಂಪೂರ್ಣ)

ಕೇರಳ; 21

ಮಹಾರಾಷ್ಟ್ರ:12.4

ಕರ್ನಾಟಕ;14.7

ತಮಿಳುನಾಡು;8

ಉತ್ತರ ಪ್ರದೇಶ;4.9

ದೇಶ;10.9

 * ದೇಶದಾದ್ಯಂತ ಕೋವಿಡ್ ಲಸಿಕೆ ನೀಡಿಕೆಗೆ ಗಮನಾರ್ಹ ಒತ್ತು ಸಿಗಬೇಕಿದೆ ಎಂದು ಅಂಕಿ–ಅಂಶಗಳು ಹೇಳುತ್ತವೆ. ಒಟ್ಟಾರೆಯಾಗಿ ದೇಶದಾದ್ಯಂತ ಎರಡೂ ಡೋಸ್ ಲಸಿಕೆ ಪಡೆದವರ ಪ್ರಮಾಣ ಶೇ 10.9ರಷ್ಟು ಮಾತ್ರ

* ಲಸಿಕೆ ನೀಡಿಕೆಯಲ್ಲಿ ಕೇರಳವು ಎಲ್ಲ ರಾಜ್ಯಗಳಿಗಿಂತ ಮುಂದಿದೆ. ಕೇರಳ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಗಮನಾರ್ಹ ಪ್ರಗತಿ ಇದೆ. ಕನಿಷ್ಠ ಒಂದು ಡೋಸ್‌ ಪಡೆದವರು ಹಾಗೂ ಎರಡೂ ಡೋಸ್ ಪಡೆದವರ ಪ್ರಮಾಣದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ

* ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಲಸಿಕೆಯ ಎರಡೂ ಡೋಸ್‌ ಪಡೆದವರ ಪ್ರಮಾಣ ಶೇ 5ರಷ್ಟನ್ನೂ ದಾಟಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು