ವಡೋದರಾ: ದಕ್ಷಿಣ ಆಫ್ರಿಕಾದಿಂದ ಗುಜರಾತ್ನ ವಡೋದರಾಗೆ ಆಗಮಿಸಿದ್ದ 29 ವರ್ಷದ ಎನ್ಆರ್ಐ ಒಬ್ಬರಿಗೆ ಕೋವಿಡ್ನ ರೂಪಾಂತರಿ ಓಮೈಕ್ರಾನ್ ಉಪತಳಿ ಬಿಎ.5 ಸೋಂಕು ದೃಢಪಟ್ಟಿದೆ ಎಂದು ಮಂಗಳವಾರ ಇಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದರು.

ಇಲ್ಲಿಗೆ ಆಗಮಿಸುವ ಮುನ್ನವೇ ಆ ವಕ್ತಿಗೆ ಮೇ 1ರಂದು ಕೊರೊನಾ ದೃಢಪಟ್ಟಿತ್ತು. ಪ್ರತ್ಯೇಕವಾಗಿದ್ದ ಬಳಿಕ ಅವರು ಮೇ 10 ರಂದು ಕೋವಿಡ್ ನೆಗಟಿವ್ ವರದಿಯೊಂದಿಗೆ ನ್ಯೂಜಿಲೆಂಡ್ನಿಂದ ಪ್ರಯಾಣ ಆರಂಭಿಸಿದ್ದರು. ವಡೋದರಾಗೆ ಆಗಮಿಸಿದ ವೇಳೆ ಅವರ ಸ್ವಾಬ್ ಅನ್ನು ಜಿನೋಮ್ ಸಿಕ್ವೇನ್ಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ಬಿಎ.5 ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದು ವಡೋದರಾ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ದೇವೇಶ್ ಪಾಟೀಲ್ ತಿಳಿಸಿದರು.

ಸೋಂಕಿತ ವ್ಯಕ್ತಿಯಲ್ಲಿ ಯಾವ ಲಕ್ಷಣಗಳು ಇಲ್ಲ. ಅವರ ತಂದೆ–ತಾಯಿ ಮಾತ್ರ ಸಂಪರ್ಕದಲ್ಲಿದ್ದರು. ಅವರಿಗೆ ನೆಗಟಿವ್ ಬಂದಿದೆ ಎಂದು ಹೇಳಿದರು.

ಓಮೈಕ್ರಾನ್ ಉಪ ತಳಿಗಳಾದ ಬಿಎ.4 ಮತ್ತು ಬಿಎ.5 ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಭಾನುವಾರ ತಮಿಳುನಾಡು ಮತ್ತು ತೆಲಂಗಾಣದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

ಜಗತ್ತಿನಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ವರದಿಯಾಗಿತ್ತು. ಬಳಿಕ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.