ಬುಧವಾರ, ಜೂನ್ 23, 2021
30 °C

ಚಿಕಿತ್ಸೆ ಸಿಗದೇ ಆತ್ಮೀಯರನ್ನು ಕಳೆದುಕೊಂಡವರಿಗೆ ರಾಹುಲ್ ಗಾಂಧಿ ಸಾಂತ್ವನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದಂತಹ ಕಾಲದಲ್ಲಿ ಚಿಕಿತ್ಸೆಯ ಕೊರತೆಯಿಂದ ತಮ್ಮ ಆತ್ಮೀಯರನ್ನು ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಸಾಂತ್ವನ ಹೇಳಿದ್ದಾರೆ.

ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, ಚಿಕಿತ್ಸೆ ಸಿಗದೇ ತಮ್ಮ ಆತ್ಮೀಯರನ್ನು ಕಳೆದುಕೊಂಡಿರುವವರಿಗೆ ಸಮಾಧಾನದ ನುಡಿಗಳನ್ನಾಡಿದ್ದಾರೆ. ‘ನಿಮ್ಮೊಂದಿಗೆ ಪ್ರತಿ ರಾಜ್ಯದ ಜನರ ಹಾರೈಕೆ ಮತ್ತು ಅನುಕಂಪವಿದೆ‘ ಎಂದು ಉಲ್ಲೇಖಿಸಿದ್ದಾರೆ.

‘ಈ ದುರಂತದ ಸನ್ನಿವೇಶದಲ್ಲಿ ನೀವು ಒಂಟಿಯಲ್ಲ. ನಾವೆಲ್ಲ ನಿಮ್ಮೊಂದಿಗಿದ್ದೇವೆ. ದೇಶದ ಜನರ ಪ್ರಾರ್ಥನೆ ಸಹಾನಭೂತಿ ನಿಮ್ಮೊಂದಿಗಿದೆ. ನಾವೆಲ್ಲ ಒಟ್ಟಾಗಿದ್ದರೆ, ಭರವಸೆಯೂ ನಮ್ಮೊಂದಿಗಿರುತ್ತದೆ‘ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು