ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ 3ನೇ ಹಂತದ ಲಸಿಕೆ ಅಭಿಯಾನ ಆರಂಭ

18 ರಿಂದ 44 ವಯೋಮಾನದವರಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ
Last Updated 1 ಮೇ 2021, 8:00 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಲಸಿಕೆ ಕೊರತೆಯ ನಡುವೆಯೂ, ದೇಶದ ಆಯ್ದ ರಾಜ್ಯಗಳ ಕೆಲವು ಖಾಸಗಿ ಆಸ್ಪತ್ರೆಗ ಳಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಮೂರನೇ ಹಂತದ ಲಸಿಕಾ ಅಭಿಯಾನ ಶನಿವಾರ ಆರಂಭವಾಗಿದೆ.

‘ಹೈದರಾಬಾದ್‌ ಮತ್ತು ಕೋಲ್ಕತ್ತದಲ್ಲಿರುವ ಆಸ್ಪತ್ರೆಯ ಶಾಖೆಗಳಲ್ಲಿ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭವಾಗಿದೆ. ದೆಹಲಿಯಲ್ಲಿ ಆರಂಭವಾಗಿಲ್ಲ’ ಎಂದು ಅಪೊಲೊ ಆಸ್ಪತ್ರೆ ಮೂಲಗಳು ತಿಳಿಸಿವೆ.

‘ದೆಹಲಿಯಲ್ಲಿರುವ ನಮ್ಮ ಆಸ್ಪತ್ರೆಯ ಸಿಬ್ಬಂದಿ ಲಸಿಕೆಯ ನಿರೀಕ್ಷೆಯಲ್ಲಿದ್ದಾರೆ. ಲಸಿಕೆ ಬಂದ ಮೇಲೆ ಸೋಮವಾರ ಅಥವಾ ಮಂಗಳವಾರದಿಂದ ಲಸಿಕೆ ನೀಡುವುದನ್ನು ಆರಂಭಿಸಲಾಗುವುದು‘ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ದೆಹಲಿಯ ಮ್ಯಾಕ್ಸ್ ಹೆಲ್ತ್‌ ಕೇರ್‌ನ ಆಯ್ದ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದನ್ನು ಆರಂಭಿಸಲಾಗಿದೆ. ಇನ್ನೂ ಕೆಲವು ಕೇಂದ್ರಗಳಲ್ಲಿ ದಿನದ ಕೊನೆಗೆ ಲಸಿಕೆ ನೀಡುವ ಪ್ರಕ್ರಿಯ ಆರಂಭವಾಗಲಿದೆ ಎಂದುಮ್ಯಾಕ್ಸ್ ಹೆಲ್ತ್‌ ಕೇರ್‌ನ ಮೂಲಗಳು ತಿಳಿಸಿವೆ.

ಲಸಿಕೆಗಳಾಗಿ ಕಾಯುತ್ತಿರುವುದರಿಂದ ದೆಹಲಿಯಲ್ಲಿರುವ ಫೋರ್ಟಿಸ್‌ ಆಸ್ಪತ್ರೆಗಳಲ್ಲಿ ಇನ್ನೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿಲ್ಲ.‘ಕೋವಾಕ್ಸಿನ್ ಲಸಿಕೆಯನ್ನು ₹1,250 ಕ್ಕೆ ನೀಡಲಾಗುವುದು. ಇದು ಲಸಿಕೆಯ ವೆಚ್ಚ ಮತ್ತು ಆಡಳಿತ ಶುಲ್ಕವನ್ನು ಒಳಗೊಂಡಿರುತ್ತದೆ‘ ಎಂದು ಫೋರ್ಟಿಸ್‌ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

‘ಪ್ರಸ್ತುತ, ಪಂಚಶೀಲ್ ಪಾರ್ಕ್, ಪಟ್ಪರ್‌ಗಂಜ್, ಶಾಲಿಮಾರ್ ಬಾಗ್, ರಾಜಿಂದರ್ ಪ್ಲೇಸ್ (ಬಿಎಲ್‌ಕೆ-ಮ್ಯಾಕ್ಸ್ ಆಸ್ಪತ್ರೆ), ನೋಯ್ಡಾ ಮತ್ತು ಎನ್‌ಸಿಆರ್‌ನಲ್ಲಿ ವೈಶಾಲಿಯಲ್ಲಿರುವ ಮ್ಯಾಕ್ಸ್ ಹೆಲ್ತ್‌ಕೇರ್ ಶಾಖೆಗಳಲ್ಲಿ ಲಸಿಕೆ ಲಭ್ಯವಿದೆ’ ಎಂದು ಅದರ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಲಸಿಕೆ ಅಭಿಯಾನ ಸುಗಮವಾಗಿ ನಡೆಯಲು ನಮ್ಮ ನೆಟ್‌ವರ್ಕ್‌ನಲ್ಲಿರುವ ಎಲ್ಲ ಆಸ್ಪತ್ರೆಗಳಲ್ಲೂ ನಾಗರಿಕರಿಗೆ ಲಸಿಕೆಗಳನ್ನು ನೀಡುತ್ತೇವೆ‘ ಎಂದು ಮ್ಯಾಕ್ಸ್‌ ಹೆಲ್ತ್‌ಕೇರ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT