ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋವಿಡ್-19 ಲಸಿಕೆ ತುರ್ತು ಬಳಕೆ ಅರ್ಜಿ ಹಿಂಪಡೆದ ಫೈಜರ್

Last Updated 5 ಫೆಬ್ರುವರಿ 2021, 7:04 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್-19 ಲಸಿಕೆ ತುರ್ತು ಬಳಕೆಯನ್ನು ಪ್ರಮಾಣೀಕರಿಸುವ ಅರ್ಜಿಯನ್ನು ಔಷಧ ತಯಾರಕ ಸಂಸ್ಥೆ ಫೈಜರ್ ಹಿಂಪಡೆದುಕೊಂಡಿದೆ.

ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ)ದೊಂದಿಗೆ ನಡೆದ ಮಾತುಕತೆಯ ಬಳಿಕ ದೇಶದಲ್ಲಿ ಕೋವಿಡ್-19 ತುರ್ತು ಬಳಕೆಯ ಪ್ರಮಾಣೀಕರಣಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಫೈಜರ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಜರ್ಮನಿಯ ಬಯೋಎನ್‌ಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಮೆರಿಕ ಮೂಲದ ಫೈಜರ್ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಇಲ್ಲಿ ಗಮನಾರ್ಹ ಅಂಶವೆಂಬಂತೆ ದೇಶದಲ್ಲಿ ಕೋವಿಡ್-19 ಲಸಿಕೆ ತುರ್ತು ಬಳಕೆಯ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ಮೊದಲ ಸಂಸ್ಥೆ ಫೈಜರ್ ಆಗಿದೆ.

ಡಿಸಿಜಿಐ ಜೊತೆಗೆ ನಡೆದ ಸಭೆಯಲ್ಲಿ ಭಾರತದ ಔಷಧ ನಿಯಂತ್ರಕಕ್ಕೆ ಬೇಕಾಗಿರುವ ಹೆಚ್ಚುವರಿ ಮಾಹಿತಿಯ ಬಗ್ಗೆ ತಿಳುವಳಿಕೆಯ ಆಧಾರದಲ್ಲಿ ಈ ಕ್ಷಣದಲ್ಲಿ ತನ್ನ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ತಿಳಿಸಿದೆ.

ಅದೇ ಹೊತ್ತಿಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ ಬೇಡಿಕೆಯಂತೆ ಹೆಚ್ಚಿನ ಮಾಹಿತಿಯೊಂದಿಗೆ ಭವಿಷ್ಯದಲ್ಲಿ ಅರ್ಜಿಯನ್ನು ಮರು ಸಲ್ಲಿಸಲಾಗುವುದು ಎಂಬುದನ್ನು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT