ಬರ್ಲಿನ್ (ಜರ್ಮನಿ): ಜಾಗತಿಕ ಬೇಡಿಕೆ ಹೆಚ್ಚಳದ ಪರಿಣಾಮವಾಗಿ 2 ಶತಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಯೋಜನೆ ಹೊಂದಿರುವುದಾಗಿ ಜರ್ಮನ್ ಮೂಲದ ಔಷಧ ತಯಾರಿಕಾ ಕಂಪೆನಿ ಬಯೋಎನ್‌ಟೆಕ್ ಪ್ರಕಟಿಸಿದೆ.

‘ಜಾಗತಿಕ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಪ್ರತಿಯಾಗಿ, ಈ ಹಿಂದೆ ಅಂದಾಜಿಸಿದ್ದುದಕ್ಕಿಂತ ಶೇ.50 ರಷ್ಟು ಹೆಚ್ಚು ಪ್ರಮಾಣದ ಲಸಿಕೆಯನ್ನು ಅಂದರೆ, 2021ರಲ್ಲಿ 130 ಕೋಟಿ ಬದಲು 200 ಕೋಟಿ ಡೋಸ್‌ನಷ್ಟು ಉತ್ಪಾದಿಸಲು ಯೋಜಿಸಿದ್ದೇವೆ’ ಎಂದು ಪ್ರಕಟಿಸಿದೆ.

ಅಮೆರಿಕ ಮೂಲದ ಫೈಝರ್ ಸಹಯೋಗದಲ್ಲಿ ಬಯೋಎನ್‌ಟೆಕ್ ಕೋವಿಡ್–19 ಲಸಿಕೆ ಅಭಿವೃದ್ಧಿಪಡಿಸಿದೆ.

‘ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೇವೆ. ಬೆಲ್ಜಿಯಂನ ಪೂರಸ್‌ನಲ್ಲಿರುವ ಫೈಝರ್ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಗಳ ಮಾರ್ಪಾಡನ್ನು ಯಶಸ್ವಿಯಾಗಿ ಮುಗಿಸಲಾಗಿದೆ’ ಎಂದೂ ತಿಳಿಸಿದೆ.

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ ಈವರೆಗೆ 10.34 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ದೃಢಪಟ್ಟಿವೆ. ಇದರಲ್ಲಿ 5.73 ಕೋಟಿ ಸೋಂಕಿತರು ಗುಣಮುಖರಾಗಿದ್ದು, 22 ಲಕ್ಷ ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.