ನವದೆಹಲಿ: ಕೋವಿಡ್ ಭೀತಿ ಕಾರಣದಿಂದ ಹಬ್ಬಗಳ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಗುಂಪುಗೂಡಲು ಅವಕಾಶ ನೀಡಬಾರದು. ಅನಿವಾರ್ಯ ಎನಿಸಿದಲ್ಲಿ ಸಾಮೂಹಿಕವಾಗಿ ಲಸಿಕೆ ಪಡೆಯಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಜನರು ಆದ್ಯತೆ ಮೇರೆಗೆ ಲಸಿಕೆ ಪಡೆಯಬೇಕು, ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಟ್ಟಾರೆಯಾಗಿ ದೇಶದಲ್ಲಿ ವಾರದಿಂದ ವಾರಕ್ಕೆ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರೂ ಇನ್ನೂ ಪೂರ್ಣವಾಗಿ ಎರಡನೇ ಅಲೆ ಅಂತ್ಯಗೊಂಡಿಲ್ಲ ಎಂಬುದನ್ನು ಗಮನಿಸಬೇಕು ಎಂದು ಎಚ್ಚರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದ 39 ಜಿಲ್ಲೆಗಳಲ್ಲಿ ಸೋಂಕು ದೃಢೀಕರಣ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಇದೆ. ಹಾಗೆಯೇ, 38 ಜಿಲ್ಲೆಗಳಲ್ಲಿ ದೃಢೀಕರಣ ಪ್ರಮಾಣವು ಶೇ 1 ರಿಂದ 10ರಷ್ಟು ಇದೆ ಎಂದು ತಿಳಿಸಿದರು.

ದೇಶದಾದ್ಯಂತ ವಯಸ್ಕರಲ್ಲಿ ಶೇ 16ರಷ್ಟು ಜನಸಂಖ್ಯೆಗೆ ಲಸಿಕೆಯ ಎರಡೂ ಡೋಸ್ ನೀಡಲಾಗಿದೆ. ಶೇ 54ರಷ್ಟು ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಮೂರನೇ ಅಲೆ ಆರಂಭವಾಗುವ ಭೀತಿ ಇದೆ. ಹಬ್ಬಗಳ ಋತುವಿನಲ್ಲಿ ಜನರ ಗುಂಪುಗೂಡುವಿಕೆ ತಪ್ಪಿಸುವುದು ಅಗತ್ಯ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಡಾ.ಬಲರಾಂ ಭಾರ್ಗವ ಅವರು ಹೇಳಿದರು.

ನಾಗರಿಕರು ಕೂಡಾ ಆದಷ್ಟೂ ಹಬ್ಬಗಳ ಆಚರಣೆಯನ್ನು ಮನೆಗೇ ಸೀಮಿತಗೊಳಿಸಬೇಕು ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.