Covid India Update| ಇಂದು 2,022 ಪ್ರಕರಣಗಳು ಪತ್ತೆ: 46 ಸಾವು

ನವದೆಹಲಿ: 24 ಗಂಟೆಗಳ ಅವಧಿಯಲ್ಲಿ ಭಾರತ ಹೊಸದಾಗಿ 2,022 ಕೋವಿಡ್ ಪ್ರಕರಣಗಳನ್ನು ಕಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,31,38,393ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,832ಕ್ಕೆ ಇಳಿದಿದೆ.
ಈ ಒಂದು ದಿನದ ಅವಧಿಯಲ್ಲಿ 46 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 5,24,458ಕ್ಕೆ ಏರಿಕೆಯಾಗಿದೆ.
ದೇಶದ ದೈನಂದಿನ ಪಾಸಿಟಿವಿಟಿ ದರ ಶೇ 0.50 ರಷ್ಟು ಇದೆ. ದೇಶದಲ್ಲಿ ಈ ವರೆಗೆ 192 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
#COVID19 | India reports 2,022 fresh cases, 2,099 recoveries, and 46 deaths in the last 24 hours.
Total active cases are 14,832. Daily positivity rate 0.69% pic.twitter.com/IiHj1lxv6K
— ANI (@ANI) May 23, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.