ಮಂಗಳವಾರ, ಏಪ್ರಿಲ್ 20, 2021
31 °C

Covid India Update| ಏರುಗತಿಯಲ್ಲಿದ್ದ ಕೋವಿಡ್‌ ಪ್ರಕರಣಗಳಲ್ಲಿ ಅಲ್ಪ ಇಳಿಕೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಸತತ ಏರಿಕೆ ಕಾಣುತ್ತಿದ್ದ ಕೋವಿಡ್‌ ಪ್ರಕರಣಗಳು ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿವೆ.

ಶುಕ್ರವಾರ 16,577 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಶನಿವಾರ ಬೆಳಗ್ಗೆ 16,488 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಏರುಗತಿಯಲ್ಲಿದ್ದ ಕೋವಿಡ್‌ ಕೊಂಚ ಇಳಿದಂತಾಗಿದೆ.

ಇನ್ನು, 'ಈ 24 ಗಂಟೆಗಳ ಅವಧಿಯಲ್ಲಿ 113 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. 12,771 ಮಂದಿ ಗುಣಮುಖರಾಗಿದ್ದಾರೆ,' ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.

ದೇಶದಲ್ಲಿ ಒಟ್ಟಾರೆ 1,10,79,979 ಕೋವಿಡ್‌ ಪ್ರಕರಣಗಳು ದೃಢವಾಗಿವೆ. 1,07,63,451 ಮಂದಿ ಗುಣಮುಖರಾಗಿದ್ದಾರೆ. 1,56,938 ಮಂದಿ ಈ ವರೆಗೆ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿರುವುದು 1,59,590 ಸಕ್ರಿಯ ಪ್ರಕರಣಗಳಷ್ಟೇ.

ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಒಟ್ಟು 1,42,42,547 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು