ಶುಕ್ರವಾರ, ಸೆಪ್ಟೆಂಬರ್ 17, 2021
28 °C

ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆ ಸಿಗಬಹುದು: ಎನ್‌ಐವಿ ನಿರ್ದೇಶಕಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆಗಳು ಲಭ್ಯವಾಗಬಹುದು. 2 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಪ್ರಯೋಗಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕಿ ಪ್ರಿಯಾ ಅಬ್ರಹಾಂ ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಟಿಟಿ ವೇದಿಕೆಯಾದ ಭಾರತ ವಿಜ್ಞಾನಕ್ಕೆ ನೀಡಿದ ಸಂದರ್ಶನದಲ್ಲಿ, ಅಬ್ರಹಾಂ ಅವರು 2 ರಿಂದ 18 ವರ್ಷ ವಯಸ್ಸಿನವರಿಗೆ 2/3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ ಎಂದು ಹೇಳಿದರು.

‘ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗುತ್ತವೆ. ಅವುಗಳನ್ನು ನಿಯಂತ್ರಕರಿಗೆ ನೀಡಲಾಗುವುದು. ಬಹುಶಃ ಸೆಪ್ಟೆಂಬರ್ ಅಥವಾ ಸೆಪ್ಟೆಂಬರ್ ನಂತರ, ನಾವು ಮಕ್ಕಳಿಗೆ ಲಸಿಕೆ ನೀಡಬಹುದು. ಅದು ಕೊವಾಕ್ಸಿನ್ ಆಗಿರಬಹುದು‘ಎಂದು ಅವರು ಹೇಳಿದರು.

ಝೈಡಸ್ ಕ್ಯಾಡಿಲಾ ಪ್ರಯೋಗಗಳು ನಡೆಯುತ್ತಿವೆ. ಆ ಲಸಿಕೆಗಳು ಸಹ ಲಭ್ಯವಾಗಬಹುದು ಎಂದು ಅವರು ಹೇಳಿದರು.

ಎನ್ಐವಿ, ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಡಿಯಲ್ಲಿರುವ ಒಂದು ಸಂಸ್ಥೆಯಾಗಿದೆ.

ಕಳೆದ ತಿಂಗಳು, ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ, ಮಕ್ಕಳಿಗೆ ಶೀಘ್ರದಲ್ಲೇ ಕೋವಿಡ್ ಲಸಿಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು
.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು