ಶುಕ್ರವಾರ, ಜನವರಿ 22, 2021
23 °C
ಪುಣೆಯ ಸೀರಂ ಸಂಸ್ಥೆಯಿಂದ 13 ನಗರಗಳಿಗೆ 56 ಲಕ್ಷ ಡೋಸ್ ಲಸಿಕೆ ಪೂರೈಕೆ

‘ಕೋವಿಶೀಲ್ಡ್’ ರವಾನೆ –ಅಭಿಯಾನಕ್ಕೆ ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಪುಣೆ: ಕೋವಿಡ್ ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನ ಕೈಗೊಳ್ಳಲು ಸಿದ್ಧತೆ ಚುರುಕುಗೊಂಡಿದ್ದು, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಿಂದ 56 ಲಕ್ಷ ಡೋಸ್ ಲಸಿಕೆಯನ್ನು ಮಂಗಳವಾರ ವಿವಿಧ ರಾಜ್ಯಗಳಿಗೆ ರವಾನಿಸಲಾಯಿತು.

ಜ.16ರಂದು ಅಭಿಯಾನ ಆರಂಭಿ ಸಲು ನಿರ್ಧರಿಸಿದ್ದು, ಪುಣೆಯಿಂದ 13 ನಗರಗಳಿಗೆ ವಿಮಾನದಲ್ಲಿ ಲಸಿಕೆ ರವಾನೆ ಮಾಡಲಾಗಿದೆ. ನಾಗರಿಕ ವಿಮಾನ ಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಟ್ವೀಟ್‌ ಮೂಲಕ ಇದನ್ನು ಪ್ರಕಟಿಸಿದರು.

ಸ್ಪೈಸ್‌ಜೆಟ್, ಗೋ ಏರ್, ಇಂಡಿಗೋ ಮತ್ತು ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಗಳು 9 ವಿಮಾನ ಗಳನ್ನು ಈ ಉದ್ದೇಶಕ್ಕಾಗಿ ಕಾರ್ಯಾಚರಣೆಗೊಳಿಸಿದವು. 

ಅಲ್ಲದೆ, ಗುವಾಹಟಿ (2.70 ಲಕ್ಷ ಡೋಸ್), ಕೋಲ್ಕೊತ್ತ (9.96 ಲಕ್ಷ) ಹೈದರಾಬಾದ್ (3.70 ಲಕ್ಷ), ಭುವನೇಶ್ವರ (4.80 ಲಕ್ಷ), ಬೆಂಗಳೂರು (6.48 ಲಕ್ಷ), ಪಾಟ್ನಾ (5.52 ಲಕ್ಷ) ಹಾಗೂ ವಿಜಯವಾಡ (4.08 ಲಕ್ಷ) ನಗರಗಳಿಗೆ ಲಸಿಕೆಗಳನ್ನು ಸಾಗಣೆ ಮಾಡಲಾಗಿದೆ ಎಂದು ಸ್ಪೈಸ್‌ಜೆಟ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸಿಂಗ್ ಹೇಳಿದರು.

ಲಸಿಕೆಗಳನ್ನು ಹೊತ್ತ ಲಾರಿಗಳು ಸೀರಂ ಇನ್‌ಸ್ಟಿಟ್ಯೂಟ್ ಆವರಣದಿಂದ ವಿಮಾನನಿಲ್ದಾಣಕ್ಕೆ ನಿರ್ಗಮಿಸುವ ಮುನ್ನ ‘ಪೂಜೆ’ ನೆರವೇರಿಸಲಾಯಿತು.

‘ಏಪ್ರಿಲ್‌ ವೇಳೆಗೆ ಮತ್ತೆ 4.5 ಕೋಟಿ ಡೋಸ್‌ ಖರೀದಿ‘: ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಏಪ್ರಿಲ್‌ ವೇಳೆಗೆ ಮತ್ತೆ 4.5 ಕೋಟಿ ಡೋಸ್ ನಷ್ಟು ಕೋವಿಶೀಲ್ಡ್ ಲಸಿಕೆ ಖರೀದಿಸಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಸರ್ಕಾರ ಒಟ್ಟಾರೆ 6 ಕೋಟಿ ಡೋಸ್ ಲಸಿಕೆ ಖರೀದಿಸಲು ಸೀರಂ ಇನ್‌ಸ್ಟಿಟ್ಯೂಟ್‌ ಮತ್ತು ಭಾರತ್ ಬಯೋಟೆಕ್‌ಗೆ ಸೋಮವಾರ ಆದೇಶ ಹೊರಡಿಸಿದ್ದು, ಇದರ ಒಟ್ಟು ವೆಚ್ಚ ರೂ. 1.300 ಕೋಟಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು