ಭಾನುವಾರ, ಜೂನ್ 13, 2021
23 °C

‘ಕೋವಿನ್’ ಪೋರ್ಟಲ್: ಶೀಘ್ರದಲ್ಲೇ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿನ್’ ವೆಬ್‌ ಪೋರ್ಟಲ್ ಮುಂದಿನ ವಾರದಿಂದ ಹಿಂದಿ ಮತ್ತು 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ತಿಳಿಸಿದೆ.

ಕೋವಿಡ್ -19ರ ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡಲು ಇನ್ನೂ 17 ಪ್ರಯೋಗಾಲಯಗಳನ್ನು ಐಎನ್‌ಎಸ್‌ಎಸಿಒಜಿ ನೆಟ್‌ವರ್ಕ್‌ಗೆ ಸೇರಿಸಲಾಗುವುದು ಎಂದೂ ಸಚಿವಾಲಯವು ಹೇಳಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೋವಿಡ್‌–19 ಕುರಿತು ನಡೆದ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಪ್ರಕಟಣೆಯು ತಿಳಿಸಿದೆ.

‘ಕೋವಿನ್’ ವೆಬ್‌ ಪೋರ್ಟಲ್‌ನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿ ಇರುವ ಕುರಿತು ಮಾರ್ಗಸೂಚಿಗಳ ಮಾಹಿತಿಯನ್ನು ನೀಡಲಾಗಿದ್ದು, ಹಿಂದಿ ಸೇರಿದಂತೆ ಇತರ 14 ಪ್ರಾದೇಶಿಕ ಭಾಷೆಗಳಲ್ಲೂ ಮುಂದಿನ ವಾರದಿಂದ ಮಾಹಿತಿ ಲಭ್ಯವಾಗಲಿದೆ. ಆಸ್ಪತ್ರೆಗೆ ದಾಖಲಿಸುವುದು, ಐಸಿಯುಗೆ ಪ್ರವೇಶ, ರೆಮ್‌ಡಿಸಿವಿರ್ ಕುರಿತ ಮಾಹಿತಿಗಳು ಎದ್ದು ಕಾಣುವಂತೆ ಚಿಹ್ನೆಗಳನ್ನೂ ಪೋರ್ಟಲ್‌ನಲ್ಲಿ ಅಳವಡಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು