ಗುರುವಾರ , ಜನವರಿ 27, 2022
27 °C

ಉ. ಪ್ರದೇಶದ ಸರ್ಕಾರ ಕ್ರಿಮಿನಲ್‌ಗಳೊಂದಿಗೆ 'ಜೈಲ್ ಜೈಲ್' ಆಟವಾಡುತ್ತಿದೆ: ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಮೀರತ್: ಉತ್ತರ ಪ್ರದೇಶದಲ್ಲಿ ಈ ಹಿಂದೆ ಮಾಫಿಯಾ ಮತ್ತು ಕ್ರಿಮಿನಲ್‌ಗಳು ಅವರಿಗೆ ಇಷ್ಟಬಂದಂತೆ ಆಟವಾಡುತ್ತಿದ್ದರು. ಆದರೆ, ಈಗ ಯೋಗಿ ಆದಿತ್ಯನಾಥ್ ಸರ್ಕಾರ ಅವರೊಂದಿಗೆ 'ಜೈಲ್ ಜೈಲ್' ಆಟವಾಡುತ್ತಿದೆ' ಎಂದಿರುವ ಪ್ರಧಾನಿ ಮೋದಿ ಈ ಹಿಂದೆ ಆಳ್ವಿಕೆ ನಡೆಸಿದ್ದ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳು ತಮ್ಮ ಆಟವನ್ನು ಆಡುತ್ತಿದ್ದವು. ಈ ಮೊದಲು ಅಕ್ರಮವಾಗಿ ಭೂಮಿಯನ್ನು ಕಸಿದುಕೊಳ್ಳುವ ಟೂರ್ನಮೆಂಟ್‌ಗಳು ನಡೆಯುತ್ತಿದ್ದವು. ತಮ್ಮ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಜನರು ಹೇಳುತ್ತಿದ್ದರು' ಎಂದಿದ್ದಾರೆ.

'ತಮ್ಮ ಮನೆಗಳಿಗೆ ಹೇಗೆ ಬೆಂಕಿ ಹಚ್ಚಲಾಗುತ್ತಿತ್ತು ಎನ್ನುವುದನ್ನು ಮೀರತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಮರೆಯಲು ಸಾಧ್ಯವಿಲ್ಲ ಮತ್ತು ಈ ಹಿಂದಿನ ಸರ್ಕಾರ ಮಾಫಿಯಾಗಳು ಮತ್ತು ಕ್ರಿಮಿನಲ್‌ಗಳು ಆಟವಾಡಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಇದರ ಪರಿಣಾಮವಾಗಿ ಜನರು ತಮ್ಮ ಪೂರ್ವಜರ ಮನೆಗಳನ್ನು ಬಿಟ್ಟು ಹೊರನಡೆಯುವಂತಾಯಿತು ಮತ್ತು ಅದು ಸಾಮೂಹಿಕ ವಲಸೆಗೆ ಕಾರಣವಾಯಿತು' ಎಂದು ದೂರಿದರು.

'ಈಗಿನ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಕ್ರಿಮಿನಲ್‌ಗಳೊಂದಿಗೆ 'ಜೈಲ್ ಜೈಲ್' ಆಟವನ್ನಾಡುತ್ತಿದೆ. 5 ವರ್ಷಗಳ ಹಿಂದಷ್ಟೇ ಮೀರತ್‌ನ ಪುತ್ರಿಯರು ಸಂಜೆ ವೇಳೆ ಮನೆಯಿಂದ ಹೊರಗೆ ನಡೆಯಲು ಭಯಪಡುತ್ತಿದ್ದರು. ಇಂದು ಮೀರತ್‌ನ ಪುತ್ರಿಯರು ದೇಶವೇ ಹೆಮ್ಮೆ ಪಡುವಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ' ಎಂದರು.

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧವೂ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು