ಗುರುವಾರ , ಸೆಪ್ಟೆಂಬರ್ 23, 2021
24 °C

42 ಭ್ರಷ್ಟಾಚಾರ ಪ್ರಕರಣ: ಗಂಭೀರವಾಗಿ ಪರಿಗಣಿಸಿದ ಸಿವಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಜಾಗೃತ ಆಯೋಗ

ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳ ಭಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಾನು ನೀಡಿದ್ದ ಸಲಹೆ ಪಾಲನೆಯಾಗದಿರುವ 42 ಪ್ರಕರಣಗಳನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಗಂಭೀರವಾಗಿ ಪರಿಗಣಿಸಿದೆ.

ಇದರಲ್ಲಿ ರೈಲ್ವೆಯ 10 ಮತ್ತು ಕೆನರಾ ಬ್ಯಾಂಕಿನ ಐದು ಪ್ರಕರಣಗಳೂ ಇವೆ. ಅಲ್ಲದೇ ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯಲ್ಲೂ ತಲಾ ಎರಡು ಪ್ರಕರಣಗಳಿವೆ ಎಂದು ವರದಿ ಹೇಳಿದೆ.

ವಿವಿಧ ಬ್ಯಾಂಕ್‌ ಮತ್ತು ಇಲಾಖೆಗಳಲ್ಲಿನ ಪ್ರಕರಣಗಳ ಪಟ್ಟಿ ಬಿಡುಗಡೆ ಮಾಡಿರುವ ಸಿವಿಸಿ, ‘ಆಯೋಗದ ಸಲಹೆಯನ್ನು ಅಂಗೀಕರಿಸದಿರುವುದು ಅಥವಾ ಆಯೋಗದೊಂದಿಗೆ ಸಮಾಲೋಚಿಸದಿರುವುದು ಜಾಗರೂಕ ಪ್ರಕ್ರಿಯೆಯನ್ನು ಹಾಳುಮಾಡುತ್ತದೆ ಮತ್ತು ಜಾಗೃತ ಆಡಳಿತದ ನಿಷ್ಪಕ್ಷಪಾತವನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳಿದೆ.

2020ರ ಸಾಲಿನ ಸಿವಿಸಿಯ ವಾರ್ಷಿಕ ವರದಿಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ  ಮಂಡಿಸಲಾಗಿದೆ. ಈ ವರದಿಯನ್ನು ಸಿವಿಸಿ ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ ಅಪ್‌ಲೋಡ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು