ಹೆಪ್ಪುಗಟ್ಟಿದ ಕಾಶ್ಮೀರದ ದಾಲ್ ಸರೋವರ: 30 ವರ್ಷಗಳಲ್ಲೇ ಕಡಿಮೆ ತಾಪಮಾನ

ಶ್ರೀನಗರ: ಶ್ರೀನಗರದಲ್ಲಿ ಗುರುವಾರ ಕನಿಷ್ಠ ತಾಪಮಾನವು ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 30 ವರ್ಷಗಳಲ್ಲಿ ದಾಖಲಾದ ಅತಿ ಕನಿಷ್ಠ ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.
‘ಇಲ್ಲಿ ಶೀತ ಅಲೆಯ ಪರಿಸ್ಥಿತಿ ಸೃಷ್ಟಿಯಾಗಿದ್ದು, ಕಾಶ್ಮೀರದ ದಾಲ್ ಸರೋವರ ಮತ್ತು ಹಲವು ಜಲಮೂಲಗಳು ಹೆಪ್ಪುಗಟ್ಟಿವೆ’ ಎಂದು ಅಧಿಕಾರಿಗಳು ಹೇಳಿದರು.
1995ರಲ್ಲಿ ಶ್ರೀನಗರದ ಕನಿಷ್ಠ ತಾಪಮಾನವು ಮೈನಸ್ 8.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದೇ 1991 ರಲ್ಲಿ ಉಷ್ಣಾಂಶವು ಮೈನಸ್ 11.3 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. 1893 ರಲ್ಲಿ ಕನಿಷ್ಠ ತಾಪಮಾನವು ಮೈನಸ್ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಪ್ರವಾಸಿ ತಾಣ ಮತ್ತು ದಕ್ಷಿಣ ಕಾಶ್ಮೀರದ ವಾರ್ಷಿಕ ಅಮರನಾಥ ಯಾತ್ರೆಯ ಶಿಬಿರವಾದ ಪಹಲ್‌ಗಾಮ್‌ನಲ್ಲಿ ಗುರುವಾರ ತಾಪಮಾನವು ಮೈನಸ್ 11.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದಕ್ಕೂ ಮುಂದಿನ ದಿನ ಉಷ್ಣಾಂಶ ಮೈನಸ್ 11.7 ಡಿಗ್ರಿ ಸೆಲ್ಸಿಯಸ್ ಇತ್ತು.
ಗುರುವಾರ ಗುಲ್‌ಮಾರ್ಗ್‌ನಲ್ಲಿ ಮೈನಸ್ 7, ಕುಪ್ವಾರದಲ್ಲಿ ಮೈನಸ್ 6.7, ಕೊಕರ್ನಾಗ್‌ನಲ್ಲಿ ಮೈನಸ್ 10.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.