ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ದತ್ತಾಂಶ ಕೇಂದ್ರಗಳ ಮೇಲೆ 9 ತಿಂಗಳುಗಳಲ್ಲಿ 5.1 ಕೋಟಿ ಬಾರಿ ಸೈಬರ್ ದಾಳಿ

Last Updated 25 ಮಾರ್ಚ್ 2022, 9:55 IST
ಅಕ್ಷರ ಗಾತ್ರ

ನವದೆಹಲಿ:2021ರ ಏಪ್ರಿಲ್ – ಡಿಸೆಂಬರ್ ಅವಧಿಯಲ್ಲಿ ದೇಶದ ದತ್ತಾಂಶ ಕೇಂದ್ರಗಳ ಜಾಲಗಳು ಸುಮಾರು 5.1 ಕೋಟಿ ಬಾರಿ ಸೈಬರ್ ದಾಳಿ ಎದುರಿಸಿವೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ದತ್ತಾಂಶ ಕೇಂದ್ರಗಳ ಮೇಲಿನ ಸೈಬರ್ ದಾಳಿಗೆ ದಾಳಿಕೋರರು 26,166 ಯೂಸರ್‌ನೇಮ್‌ ಮತ್ತು 80,282 ಪಾಸ್‌ವರ್ಡ್‌ಗಳನ್ನು ಬಳಸಿರುವ ಬಗ್ಗೆಯೂ ವರದಿ ತಿಳಿಸಿದೆ.

ದತ್ತಾಂಶ ಕೇಂದ್ರಗಳ ಮೇಲಿನ ಸೈಬರ್ ದಾಳಿಗೆ ದಾಳಿಕೋರರು 26,166 ಯೂಸರ್‌ನೇಮ್‌ ಮತ್ತು 80,282 ಪಾಸ್‌ವರ್ಡ್‌ಗಳನ್ನು ಬಳಸಿರುವ ಬಗ್ಗೆಯೂ ವರದಿ ತಿಳಿಸಿದೆ.

ದಾಳಿಕೋರರು ದತ್ತಾಂಶ ಕೇಂದ್ರಗಳ ಕಂಪ್ಯೂಟರ್‌ಗಳಲ್ಲಿ ಹಲವು ಕಮಾಂಡ್‌ಗಳನ್ನು ಮಾಡಲು ಮತ್ತು ಮಾಲ್ವೇರ್‌ಗಳನ್ನು ಡೌನ್‌ಲೋಡ್ ಮಾಡಿ ಆ ಮೂಲಕ ಹಾನಿ ಮಾಡಲು ಯತ್ನಿಸಿದ್ದಾರೆ. ಇದು ಐಇಟಿಇ (ದಿ ಇನ್‌ಸ್ಟಿಟ್ಯೂಟ್ ಆಫ್‌ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರ್ಸ್) ಹಾಗೂ ಸಿಪಿಎಫ್‌ (ಸೈಬರ್‌ಸ್ಪೇಸ್ ಫೌಂಡೇಷನ್) ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ.

ಕೋವಿಡ್–19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ವಿಧಿಸಿದ್ದ ಸಂದರ್ಭದಲ್ಲಿ ವಿದೇಶಗಳಿಂದ, ವಿಶೇಷವಾಗಿ ಚೀನಾ ಹಾಗೂ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್ ದಾಳಿ ಯತ್ನ ನಡೆದಿತ್ತು ಎಂದು ಕೇಂದ್ರ ಸರ್ಕಾರ ಕಳೆದ ವರ್ಷ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT