ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಬಳಕೆಗೆ ಕೋವ್ಯಾಕ್ಸಿನ್‌: ಆರು ವಾರಗಳಲ್ಲಿ ಡಬ್ಲ್ಯೂಎಚ್‌ಒ ನಿರ್ಧಾರ

Last Updated 10 ಜುಲೈ 2021, 12:42 IST
ಅಕ್ಷರ ಗಾತ್ರ

ನವದೆಹಲಿ: ‘ತುರ್ತು ಬಳಕೆಗಾಗಿ ಭಾರತ್ ಬಯೊಟೆಕ್‌ ಸಂಸ್ಥೆಯ ಕೋವ್ಯಾಕ್ಸಿನ್‌ ಲಸಿಕೆಗೆ ಅನುಮೋದನೆ ನೀಡುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) 4 ರಿಂದ 6 ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಂಭವವಿದೆ’ ಎಂದು ಡಬ್ಲ್ಯೂಎಚ್ಒದ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ತಿಳಿಸಿದ್ದಾರೆ.

ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ) ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಕೋವ್ಯಾಕ್ಸಿನ್ ಲಸಿಕೆಯು ಡಬ್ಲ್ಯೂಎಚ್‌ಒ ಪರಿಶೀಲನೆಯಲ್ಲಿದೆ. ಅದನ್ನು ಉತ್ಪಾದಿಸಿರುವ ಭಾರತ್‌ ಬಯೊಟೆಕ್‌ ಸಂಸ್ಥೆಯು ಪೂರಕ ದಾಖಲೆಗಳನ್ನು ಡಬ್ಲ್ಯೂಎಚ್‌ಒ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದೆ’ ಎಂದು ತಿಳಿಸಿದರು.

ಡಬ್ಲ್ಯೂಎಚ್ಒ ಮಾರ್ಗದರ್ಶಿ ಸೂತ್ರಗಳ ಅನುಸಾರ, ಸಾರ್ವಜನಿಕ ಆರೋಗ್ಯದ ತುರ್ತು ಸಂದರ್ಭದಲ್ಲಿ ಬಳಸಬಹುದಾದ ಔಷಧ, ಲಸಿಕೆಗಳನ್ನು ಆಧರಿಸಿ ತುರ್ತು ಬಳಕೆಯ ಪಟ್ಟಿ (ಇಯುಎಲ್‌) ತಯಾರಿಸಲಾಗುತ್ತದೆ.

‘ಇಯುಎಲ್‌ಗೆ ಸೇರಿಸಲು ಕೆಲವೊಂದು ಪ್ರಕ್ರಿಯೆಗಳಿವೆ. ಕಂಪನಿಯು ಲಸಿಕೆಯ ಮೂರು ಹಂತದ ಪ್ರಯೋಗಗಳನ್ನು ಪೂರೈಸಿದ್ದು, ಪೂರಕ ಅಂಕಿ ಅಂಶಗಳನ್ನು ಸಲ್ಲಿಸಬೇಕಾಗುತ್ತದೆ. ಅದನ್ನು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತ ಸಲಹಾ ಸಂಸ್ಥೆಯು ಪರಿಶೀಲಿಸಲಿದೆ‘ ಎಂದು ಸೌಮ್ಯಾ ಅವರು ತಿಳಿಸಿದರು.

ಪ್ರಸ್ತುತ, ವಿಶ್ವ ಆರೋಗ್ಯ ಸಂಸ್ಥೆಯು ಪೈಝರ್ ಮತ್ತು ಆಸ್ಟ್ರಾಜೆನಿಕಾ–ಎಸ್‌ಕೆ ಸಂಸ್ಥೆಯು ಉತ್ಪಾದಿಸಿರುವ ಲಸಿಕೆ ಸೇರಿದಂತೆ ಆರು ಲಸಿಕೆಗಳಿಗೆ ಮಾನ್ಯತೆ ನೀಡಿದೆ. ಪರಿಣತರ ಸಮೂಹದ ಸಲಹೆ ಆಧರಿಸಿ ಆರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಈಗ ಕೋವ್ಯಾಕ್ಸಿನ್ ಲಸಿಕೆಯನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT