ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಸೇನೆಯ 400 ನಿವೃತ್ತ ವೈದ್ಯರ ನೇಮಕಕ್ಕೆ ರಕ್ಷಣಾ ಇಲಾಖೆ ಆದೇಶ

11 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಕ್ರಮ
Last Updated 9 ಮೇ 2021, 10:59 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ರೋಗಿಗಳ ಚಿಕಿತ್ಸೆಯಲ್ಲಿ ನೆರವಾಗಲು, ಸೇನೆಯಿಂದ ನಿವೃತ್ತರಾಗಿರುವ 400 ಜನ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಆರ್ಮ್ಡ್‌ ಫೋರ್ಸಸ್‌ ಮೆಡಿಕಲ್‌ ಸರ್ವೀಸಸ್‌ಗೆ (ಎಎಫ್ಎಂಎಸ್‌) ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಆರ್ಮಿ ಮೆಡಿಕಲ್‌ ಕಾರ್ಪ್ಸ್‌ (ಎಂಎಂಸಿ) ಹಾಗೂ ಶಾರ್ಟ್‌ ಸರ್ವೀಸ್‌ ಕಮಿಷನ್‌ನ (ಎಸ್‌ಎಸ್‌ಸಿ) ವೈದ್ಯರನ್ನು ಗರಿಷ್ಠ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.

ಕೊರೊನಾ ಸೋಂಕಿನ ಎರಡನೇ ಅಲೆ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದೆ. ಅನೇಕ ರಾಜ್ಯಗಳ ಆಸ್ಪತ್ರೆಗಳ್ಲಲಿ ವೈದ್ಯರು, ಆರೋಗ್ಯ ಕಾರ್ಯಕರ್ತರ ಕೊರತೆ ಇದೆ. ಔಷಧಿ, ಲಸಿಕೆ ಹಾಗೂ ಆಮ್ಲಜನಕ, ಹಾಸಿಗೆಗಳು ಸಿಗದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿವೃತ್ತಿ ಸಮೀಪಿಸುತ್ತಿರುವ ಎಸ್‌ಎಸ್‌ಸಿ ವೈದ್ಯರ ಸೇವಾವಧಿಯನ್ನು ಡಿಸೆಂಬರ್‌ 31ರ ವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹೆಚ್ಚುವರಿಯಾಗಿ 238 ವೈದ್ಯರ ಸೇವೆ ಲಭ್ಯವಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT