ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ತುರ್ತು ಪರಿಸ್ಥಿತಿ: ಇಂದೋರ್‌ನಲ್ಲಿ ಇಳಿದ ದೆಹಲಿ–ಬೆಂಗಳೂರು ವಿಮಾನ

Last Updated 23 ನವೆಂಬರ್ 2021, 15:30 IST
ಅಕ್ಷರ ಗಾತ್ರ

ಇಂದೋರ್‌:ದೆಹಲಿ–ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ25 ವರ್ಷದ ಮಹಿಳೆಯೊಬ್ಬರಿಗೆಏಕಾಏಕಿ ಎದೆನೋವು ಕಾಣಿಸಿಕೊಂಡ ಕಾರಣ ವಿಮಾನವನ್ನು ತುರ್ತಾಗಿ ಇಲ್ಲಿನ ದೇವಿ ಅಹಿಲ್ಯಾಭಾಯಿ ಹೊಲ್ಕರ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಸೋಮವಾರ ರಾತ್ರಿ ವಿಸ್ತಾರ ಏರ್‌ಲೈನ್‌ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ದೆಹಲಿ–ಬೆಂಗಳೂರು ಮಾರ್ಗದ ವಿಮಾನವನ್ನು ಇಂದೋರ್‌ನತ್ತ ತಿರುಗಿಸಲಾಯಿತು. ವಿಮಾನವು ರಾತ್ರಿ ಸುಮಾರು 10 ಗಂಟೆಗೆ ಇಂದೋರ್‌ಗೆ ಬಂದಿಳಿದಿದೆ. ಅವರನ್ನು ತಕ್ಷಣವೇ ಬಂತಿಯಾ ಆಸ್ಪತ್ರೆಗೆ ಕರೆದುಕೊಂಡಲಾಯಿತು. ಈ ಬಳಿಕ ವಿಮಾನವು, 11.07ಕ್ಕೆ ಬೆಂಗಳೂರಿನತ್ತ ತೆರಳಿತು’ ಎಂದು ಇಂದೋರ್‌ ವಿಮಾನ ನಿಲ್ದಾಣದಪ್ರಭಾರ ನಿರ್ದೇಶಕ ಪ್ರಬೋದ್‌ ಶರ್ಮಾ ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT