ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಮೇ 3ರ ವರೆಗೂ ಲಾಕ್‌ಡೌನ್‌: ಅರವಿಂದ್ ಕೇಜ್ರಿವಾಲ್‌

Last Updated 25 ಏಪ್ರಿಲ್ 2021, 7:15 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಮತ್ತು ಆಮ್ಲಜನಕದ ಕೊರತೆ ಎದುರಾಗಿರುವ ಬೆನ್ನಲ್ಲೇ ದೆಹಲಿ ಸರ್ಕಾರವು ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಿಸಿದೆ.

'ದೆಹಲಿಯಲ್ಲಿ ಆರು ದಿನಗಳ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದೆ. ಮುಂದಿನ ಸೋಮವಾರ (ಮೇ 3) ಬೆಳಿಗ್ಗೆ 5 ಗಂಟೆಯ ವರೆಗೂ ಲಾಕ್‌ಡೌನ್‌ ವಿಸ್ತರಿಸಲಾಗಿದೆ' ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಒಂದು ವಾರದಿಂದ ಲಾಕ್‌ಡೌನ್‌ ಘೋಷಿಸಿ, ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸಿದ್ದರೂ ದೆಹಲಿಯಲ್ಲಿ ಕೊರೊನಾ ಕಂಟಕ ಮುಂದುವರಿದಿದೆ. ಶನಿವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೆಹಲಿಯ ವಿವಿಧೆಡೆ ಹೊಸದಾಗಿ 24,103 ಜನಕ್ಕೆ ಕೊರೊನಾ ಸೋಂಕು ತಗುಲಿದೆ.

'ಆಮ್ಲಜನಕ ಪೂರೈಕೆಗೆ ಅನುವಾಗುವ ನಿಟ್ಟಿನಲ್ಲಿ ಪೋರ್ಟಲ್‌ ಆರಂಭಿಸಲಾಗಿದ್ದು, ಪ್ರತಿ 2 ಗಂಟೆಗಳಿಗೊಮ್ಮೆ ಅಪ್‌ಡೇಟ್‌ ಆಗಲಿದೆ. ಆಮ್ಲಜನಕ ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳಿಂದ ಪ್ರಸ್ತುತ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹದ ಮಾಹಿತಿ ಅಪ್‌ಡೇಟ್‌ ಆಗಲಿದೆ. ಕೇಂದ್ರ ಮತ್ತು ರಾಜ್ಯಗಳ ತಂಡಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ' ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

'ಕಳೆದ ವಾರದ ಲಾಕ್‌ಡೌನ್‌ನಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಶೇ 36ರಿಂದ 37ರಷ್ಟಿದೆ. ಆದರೆ, ಕಳೆದ ಒಂದೆರಡು ದಿನಗಳಿಂದ ಪ್ರಕರಣಗಳ ಪ್ರಮಾಣ ಇಳಿಮುಖವಾಗಿದೆ. ಇಂದು ಶೇ 30ಕ್ಕಿಂತ ಕಡಿಮೆಯಾಗಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಲಿ ಅಥವಾ ಇಳಿಕೆ, ನಾವು ಕೆಲವು ದಿನಗಳವರೆಗೂ ಗಮನಿಸುವುದು ಅಗತ್ಯವಾಗಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT