ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಿಧಾನಸಭೆಯಲ್ಲಿ 'ದೇಶಭಕ್ತಿ ಬಜೆಟ್' ಮಂಡಿಸಿದ ಮನೀಶ್ ಸಿಸೋಡಿಯಾ

Last Updated 9 ಮಾರ್ಚ್ 2021, 7:55 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ 'ದೇಶಭಕ್ತಿ ಬಜೆಟ್' ಮಂಡಿಸಿದ್ದಾರೆ.

"75 ವರ್ಷಗಳ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಮಾರ್ಚ್ 12 ರಿಂದ ಕೇಂದ್ರದಿಂದ ಪ್ರಾರಂಭವಾಗುವ 75 ವಾರಗಳ 'ದೇಶಭಕ್ತಿ ಮಹೋತ್ಸವ'ದ ಆಚರಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು ನಾನು ಈ 'ದೇಶಭಕ್ತಿ ಬಜೆಟ್' ಅನ್ನು ಪ್ರಸ್ತುತಪಡಿಸುತ್ತೇನೆ. ಈ ಬಜೆಟ್ ಭಾರತದ 75 ಮತ್ತು 100 ವರ್ಷಗಳ ಸ್ವಾತಂತ್ರ್ಯದ ಮೇಲೆ ಕೇಂದ್ರೀಕರಿಸುತ್ತದೆ" ಅವರು ಹೇಳಿದರು.

2047 ರ ವೇಳೆಗೆ ದೆಹಲಿ ನಗರದ ತಲಾದಾಯವನ್ನು ಸಿಂಗಾಪುರದ ಮಟ್ಟಕ್ಕೆ ಹೆಚ್ಚಿಸಲು ದೆಹಲಿ ಸರ್ಕಾರ ಉದ್ದೇಶಿಸಿದೆ ಎಂದು ಸಿಸೋಡಿಯಾ ಹೇಳಿದರು.

"ದೇಶಭಕ್ತಿ ಬಜೆಟ್" ಅಡಿಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ 500 ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಧ್ವಜ ಸ್ತಂಭ ಸ್ಥಾಪನೆಗೆ 45 ಕೋಟಿ ರೂ.ಗೆ ನಗರಾಡಳಿತ ಪ್ರಸ್ತಾವನೆ ಇಟ್ಟಿದೆ ಎಂದು ಹೇಳಿದ್ದಾರೆ.

ಇದರ ಭಾಗವಾಗಿ, ನಗರದ ಶಾಲೆಗಳಲ್ಲಿ "ದೇಶಭಕ್ತಿ ಪೀರಿಯಡ್" ಇರುತ್ತದೆ. 75 ವಾರಗಳ "ದೇಶಭಕ್ತಿ" ಸಂಭ್ರಮಾಚರಣೆಯಲ್ಲಿ ಭಗತ್ ಸಿಂಗ್ ಅವರ ಜೀವನದ ಕುರಿತಾದ ಕಾರ್ಯಕ್ರಮಗಳಿಗೆ 10 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

2020-21ರ ಬಜೆಟ್‌ಗಿಂತ ಈ ವರ್ಷದ ಬಜೆಟ್‌ನಲ್ಲಿ ಒಟ್ಟು ವಿನಿಯೋಗವು ಶೇಕಡಾ 6.1 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT