ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಆಸ್ಪದ ನೀಡಬಾರದು: ದೆಹಲಿ ಹೈಕೋರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿಯ ವಿವಿಧ ಮಾರುಕಟ್ಟೆಗಳಲ್ಲಿ ‘ಕೋವಿಡ್ 19‘ ಮಾರ್ಗಸೂಚಿ ಉಲ್ಲಂಘನೆ ಯಾಗುತ್ತಿರುವ ಕುರಿತು ಉಲ್ಲೇಖಿಸಿರುವ ದೆಹಲಿ ಹೈಕೋರ್ಟ್, ‘ಕೋವಿಡ್–19‘ ಮೂರನೇ ಅಲೆಯನ್ನು ಉತ್ತೇಜಿಸಲು ಕಾರಣವಾಗುವಂತಹ ಇಂಥ ನಿಯಮ ಉಲ್ಲಂಘನೆ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿದೆ.
ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಕೋವಿಡ್ – 19 ಮಾರ್ಗಸೂಚಿ ಪಾಲಿಸದಿರುವಂತಹ ದೃಶ್ಯಗಳಿರುವ ಛಾಯಾಚಿತ್ರಗಳನ್ನು ಏಮ್ಸ್ನ ವೈದ್ಯರೊಬ್ಬರು ಹೈಕೋರ್ಟ್ನ ನ್ಯಾಯಮೂರ್ತಿಯೊಬ್ಬರಿಗೆ ಕಳುಹಿಸಿದ್ದರು. ಆ ಫೋಟೊಗಳನ್ನು ಆಧರಿಸಿ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಆಶಾ ಮೆನನ್ ಅವರನ್ನೊಳಗೊಂಡ ರಜಾಕಾಲದ ಪೀಠ ಈ ರೀತಿ ಸೂಚನೆ ನೀಡಿದೆ.
ಓದಿ: Covid-19 India Update: ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಇಳಿಕೆ
ಇದೇ ವೇಳೆ, ನ್ಯಾಯಾಲಯ ಮಾರುಕಟ್ಟೆ ಸ್ಥಳಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ, ಅಂಗಡಿ ಮಾಲೀಕರಿಗೆ ಅರಿವು ಮೂಡಿಸುವ ಸಂಬಂಧ ಮಾರಾಟಗಾರ ಸಂಘಗಳು ಮತ್ತು ಅಂಗಡಿಗಳ ಮಾಲೀಕರ ಒಕ್ಕೂಟದಾರರೊಂದಿಗೆ ಸಭೆ ನಡೆಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.