ಬುಧವಾರ, ನವೆಂಬರ್ 25, 2020
19 °C
ಜಲ ಸಚಿವ ಸತ್ಯೇಂದರ್ ಜೈನ್

ಮಳೆ ನೀರು ಸಂಗ್ರಹ: ದೆಹಲಿಯಲ್ಲಿ ಡುಂಗಾರಪುರ ಮಾದರಿ ಅಳವಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡುಂಗರಪುರ(ರಾಜಸ್ಥಾನ): ಬುಡಕಟ್ಟು ಸಮುದಾಯದವರೇ ಪ್ರಧಾನವಾಗಿರುವ ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿರುವ ‘ಕಡಿಮೆ ವೆಚ್ಚದ ಮಳೆ ನೀರು ಸಂಗ್ರಹ ವಿಧಾನ‘ವನ್ನು ದೆಹಲಿಯಾದ್ಯಂತ ಅಳವಡಿಸಲು ಮುಂದಾಗಿರುವುದಾಗಿ ದೆಹಲಿ ಸರ್ಕಾರದ ಜಲ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.

ಜೈನ್ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ತಂಡ ಇತ್ತೀಚೆಗೆ ಡುಂಗಾರಪುರ ಜಿಲ್ಲೆಗೆ ಭೇಟಿ ನೀಡಿ,  ಅಲ್ಲಿನ ಮನೆಗಳಲ್ಲಿ ಅಳವಡಿಸಿಕೊಂಡಿರುವ ಕಡಿಮೆ ವೆಚ್ಚದ ಮಳೆ ನೀರು ಸಂಗ್ರಹ ವಿಧಾನವನ್ನು ವೀಕ್ಷಿಸಿದೆ.

ಸಾಂಪ್ರದಾಯಿಕ ವಿಧಾನದಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಪ್ರತಿ ಮನೆಗೆ ₹50ಸಾವಿರ ರಿಂದ ₹1 ಲಕ್ಷ ವೆಚ್ಚವಾಗುತ್ತದೆ. ಆದರೆ ಈ ಡುಂಗರಪುರದಲ್ಲಿ ಅಳವಡಿಸಿರುವ ಮಾದರಿಗೆ ₹16 ಸಾವಿರ ವೆಚ್ಚವಾಗುತ್ತದೆ.

ಡುಂಗರಪುರ ಮಾದರಿ ಒಂದು ನವೀನ ಕಲ್ಪನೆಯಾಗಿದೆ. ಈ ವಿಧಾನದಲ್ಲಿ ಮಳೆ ನೀರು ಸಂಗ್ರಹವಾಗಿ, ಹೆಚ್ಚಾದ ನೀರನ್ನು ಹೊರಗೆ ಹರಿಸುವ ಬದಲು, ಕೊಳವೆಬಾವಿಗೆ ತಿರುಗಿಸಿ, ನೀರು ಇಂಗಿಸಬಹುದು.

‘ಇದು ಕ್ಲೋಸ್‌ ಲೂಪ್ ವ್ಯವಸ್ಥೆ. ಕೆಲವು ಮನೆಗಳಲ್ಲಿ ಮನೆಯ ಚಾವಣಿಯಲ್ಲಿ ಸಂಗ್ರಹಿಸಿದ ಮಳೆನೀರನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೊಳವೆಬಾವಿಗಳಿಗೆ ಸೇರುವಂತೆ ಮಾಡಿದ್ದಾರೆ. ಕೊಳವೆಯಲ್ಲಿಯೇ ಮರಳು ಶೋಧಕಗಳನ್ನು ಅಳವಡಿಸಿದ್ದಾರೆ‘ ಎಂದು ಹೇಳಿದರು.

ಡುಂಗಾರ್ ಮುನ್ಸಿಪಲ್ ಕೌನ್ಸಿಲ್ನ ಅಧ್ಯಕ್ಷ ಕೆ ಕೆ ಗುಪ್ತಾ ಅವರು ಮೊದಲು ಈ ಬಗ್ಗೆ ಹೇಳಿದಾಗ ಅವರು ಮಾದರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಿಂದ ಈ ವ್ಯವಸ್ಥೆಯನ್ನು ಸ್ವತಃ ವೀಕ್ಷಿಸಲು ಬಯಸುತ್ತೇನೆ ಎಂದು ಜೈನ್ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು