ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ವಿವಿಧ ಜಾತಿಗಳ 24 ಅರ್ಚಕರ ನೇಮಕ

ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಿದ ಡಿಎಂಕೆ ಸರ್ಕಾರ
Last Updated 14 ಆಗಸ್ಟ್ 2021, 13:35 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರವು ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ರಾಜ್ಯದ ದೇವಸ್ಥಾನಗಳಿಗೆ ವಿವಿಧ ಜಾತಿಗಳ ತರಬೇತಿ ಪಡೆದ 24 ಅರ್ಚಕರನ್ನು ಶನಿವಾರ ನೇಮಕ ಮಾಡಿದೆ.

ದೇವಸ್ಥಾನವೊಂದರ ಮದುವೆ ಮಂಟಪದಲ್ಲಿ ನಡೆದ ಕಾರ್ಯಕ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 75 ಅರ್ಚಕರಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವತಿಯಿಂದ ನೇಮಕಾತಿ ಆದೇಶಗಳನ್ನು ನೀಡಿದರು. ವಿವಿಧ ವರ್ಗಗಳ ಅಡಿಯಲ್ಲಿ 208 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ.

ಶನಿವಾರ ನೇಮಕವಾದ 24 ಮಂದಿ ಅರ್ಚಕರು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ಸರ್ಕಾರದ ವತಿಯಿಂದ ನೀಡಲಾದ ತರಬೇತಿ ಪೂರ್ಣಗೊಳಿಸಿದ್ದಾರೆ. 34 ಮಂದಿ ಇತರ ಪಾಠಶಾಲೆಗಳಲ್ಲಿ ಅರ್ಚಕ ತರಬೇತಿಯನ್ನು ಪಡೆದಿದ್ದಾರೆ. ಒಟ್ಟು 208 ನೇಮಕಾತಿಗಳಲ್ಲಿ ಭಟ್ಟಾಚಾರ್ಯರು, ಒಡುವರು, ಪೂಜಾರಿಗಳು, ತಾಂತ್ರಿಕ ಮತ್ತು ಕಚೇರಿ ಸಹಾಯಕರು ಸೂಕ್ತ ತರಬೇತಿಯ ನಂತರ ನೇಮಕಗೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಆ. 14ಕ್ಕೆ ಡಿಎಂಕೆ ಸರ್ಕಾರ ಅಧಿಕಾರ ಸ್ವೀಕರಿಸಿ 100 ದಿನಗಳಾಗಿವೆ. ಏ. 6ರಂದು ನಡೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಡಿಎಂಕೆ ಪಕ್ಷವು ಎಲ್ಲಾ ಜಾತಿಗಳಿಗೆ ಸೇರಿದವರನ್ನು ದೇವಸ್ಥಾನಗಳಲ್ಲಿ ಅರ್ಚಕರನ್ನಾಗಿ ನೇಮಕ ಮಾಡಲು ತರಬೇತಿ ನೀಡುವುದಾಗಿ ಭರವಸೆ ನೀಡಿತ್ತು. ಮೇ 7ರಂದು ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT