ಶನಿವಾರ, ಡಿಸೆಂಬರ್ 5, 2020
21 °C

ಬಿಜೆಪಿಯ ‘ವೇಲ್‌’ ಯಾತ್ರೆಗೆ ಅನುಮತಿ ಬೇಡ: ತಿರುಮಾವಳವನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ‘ಬಿಜೆಪಿಯ ಉದ್ದೇಶಿತ ‘ವೇಲ್‌’ ಅಥವಾ ‘ವೆಟ್ರಿವೇಲ್‌’ ಯಾತ್ರೆಗೆ ಅನುಮತಿ ನೀಡಬಾರದು’ ಎಂದು ವಿಡುದಲೈ ಚಿರುಥೈಗಳ್‌ ಪಕ್ಷದ (ವಿಸಿಕೆ) ಸಂಸ್ಥಾಪಕ ದೋಳ್‌ ತಿರುಮಾವಳವನ್ ಅವರು ತಮಿಳುನಾಡಿನ ಡಿಜಿಪಿ ಜೆ.ಕೆ.ತ್ರಿಪಾಠಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನವೆಂಬರ್‌ 6 ರಿಂದ ಡಿಸೆಂಬರ್‌ 6 ರವರೆಗೆ ತಮಿಳುನಾಡಿನಾದ್ಯಂತ ‘ವೇಲ್‌’ ಯಾತ್ರೆ ನಡೆಸುವುದಾಗಿ ಬಿಜೆಪಿ ಈಗಾಗಲೇ ಘೋಷಿಸಿದೆ. ಉತ್ತರ ತಮಿಳುನಾಡಿನ ತಿರುಟ್ಟಾನಿಯಲ್ಲಿ ಆರಂಭವಾಗಲಿರುವ ರ‍್ಯಾಲಿಯು ತಿರುಚೆಂಡೂರಿನಲ್ಲಿ ಕೊನೆಗೊಳ್ಳಲಿದೆ. 

‘ರಾಜ್ಯದಲ್ಲಿ ಕೋಮು ಸಂಘರ್ಷವನ್ನು ಹುಟ್ಟಿಹಾಕುವುದು ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಉದ್ದೇಶದಿಂದಲೇ ಬಿಜೆಪಿಯು ಈ ಯಾತ್ರೆ ಹಮ್ಮಿಕೊಂಡಿದೆ. ಹೀಗಾಗಿ ಇದಕ್ಕೆ ಅನುಮತಿ ನೀಡಬಾರದೆಂದು ಡಿಜಿಪಿ ಹಾಗೂ ಇತರ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ’ ಎಂದು ತಿರುಮಾವಳವನ್ ತಿಳಿಸಿದ್ದಾರೆ.

‘ಬಿಜೆಪಿಯು ಉದ್ದೇಶಿತ ಯಾತ್ರೆಯ ಪೋಸ್ಟರ್‌ಗಳಲ್ಲಿ ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್‌ ಅವರ ಭಾವಚಿತ್ರಗಳನ್ನು ಬಳಸಿರುವುದು ನಾಚಿಕೆಯ ವಿಷಯ’ ಎಂದೂ ಕಿಡಿಕಾರಿದ್ದಾರೆ.

‘ಬಿಜೆಪಿ ಮುಖಂಡ ಎಚ್‌.ರಾಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು